ರಟ್ಟಿಹಳ್ಳಿ: ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ರಟ್ಟಿಹಳ್ಳಿ ತಾಲೂಕು ಭಾರತ ಜ್ಞಾನ-ವಿಜ್ಞಾನ ಸಮಿತಿ ರಚನೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ರಾಘವೇಂದ್ರ ಎ.ಜಿ., ಅಧ್ಯಕ್ಷರಾಗಿ ಮಹೇಶ ಮೆಣಸಗಿ, ಪ್ರಧಾನ ಕಾರ್ಯದರ್ಶಿಯಾಗಿ ರತ್ನವ್ವ ಜೋಗಿಹಳ್ಳಿ, ಉಪಾಧ್ಯಕ್ಷರಾಗಿ ಕುಸುಮಾವತಿ ಮೇಗಳಮನಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಿ.ಡಿ. ಕರಿಯಣ್ಣನವರ, ಬಸವರಾಜ ಜಾಡರ, ಜಗದೀಶಕುಮಾರ ಕಠಾರೆ, ಲಲಿತಾ ಗೊಗ್ಗದ, ಖಜಾಂಚಿಯಾಗಿ ವಿಜಯ ಆಲದಕಟ್ಟಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಸುರೇಶ ಹೊಳಜೋಗಿ, ಚೇತನಕುಮಾರ ಬಣಕಾರ, ಜೆ.ಸಿ. ಹೊಸರಾಯಪ್ಪನವರ, ಜಗದೀಶ ಪೂಜಾರ, ರಾಜು ಹರವಿಶೆಟ್ಟರ್, ದಿವಾಕಲ್ ಎಲ್.ಸಿ., ಸರಸ್ವತಿ ಅಜ್ಜಪ್ಪನವರ, ರಾಘವೇಂದ್ರ ಜಂತ್ಲಿ, ಸಿ.ಬಿ. ಅಂಗಡಿ, ರೇಷ್ಮಾ ಜಿ., ಬೀರೇಶ ಎನ್., ಗದಿಗೆಪ್ಪ ಹಣಚಿಕ್ಕಿ, ಚನ್ನಮ್ಮ ಗೌರಕ್ಕನವರ ಆಯ್ಕೆಯಾದರು.
ಸಮಿತಿ ನೂತನ ಅಧ್ಯಕ್ಷ ಮಹೇಶ ಮೆಣಸಗಿ, ಕಾರ್ಯದರ್ಶಿ ರತ್ನವ್ವ ಜೋಗಿಹಳ್ಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲ್ಕರ್ಣಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ, ಜಿಲ್ಲಾ ಸಂಚಾಲಕರು ರೇಣುಕಾ ಗುಡಿಮನಿ, ಬಿ.ಡಿ. ಪಾಟೀಲ ಮತ್ತು ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.