ನಗರದ ವಿದ್ಯಾನಗರ ಬಡಾವಣೆಯಲ್ಲಿ ಗರಳಪುರಿ ನಂಜುಂಡೇಶ್ವರ ಸಾಂಸ್ಕೃತಿಕ ಕಲಾ ಬಳಗ ರಚನೆ ರಚನೆ ಮಾಡಲಾಯಿತು. ಕಲ್ಮಳ್ಳಿ ನಟರಾಜು, ನಾಗಪ್ಪ ಶಾಂತಮಲ್ಲಪ್ಪ ಸೇರಿದಂತೆ ಇತರರನ್ನು ಕಾಣಬಹುದು.  
ಜಿಲ್ಲೆ

ಗರಳಪುರಿ ನಂಜುಂಡೇಶ್ವರ ಸಾಂಸ್ಕೃತಿಕ ಕಲಾ ಬಳಗ ರಚನೆ

ನಂಜನಗೂಡು: ತಾಲೂಕು, ನಾಡಿನ ಸಾಂಸ್ಕೃತಿಕ ಪರಂಪರೆಗೆ ನೀಡಿರುವ ಕೊಡುಗೆ ಸ್ಮರಿಸುವುದರ ಜತೆಗೆ ಅದನ್ನು ಶಾಶ್ವತವಾಗಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಹ ಕಾರ್ಯ ಕ್ರಮ ಕೈಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಗರಳಪುರಿ ನಂಜುಂಡೇಶ್ವರ ಸಾಂಸ್ಕೃತಿಕ ಕಲಾ ಬಳಗ ಅಸ್ತಿತ್ವಕ್ಕೆ ತರಲಾಗಿದೆ ಎಂದು ಕಲ್ಮಳ್ಳಿ ನಟರಾಜು ತಿಳಿಸಿದರು.

ನಗರದ ವಿದ್ಯಾನಗರ ಬಡಾವಣೆಯಲ್ಲಿ ಶುಕ್ರವಾರ ನೂತನ ಸಂಘ ರಚನೆ ಮಾಡಿ ಮಾತನಾಡಿದ ಅವರು, ದಕ್ಷಿಣ ಕಾಶಿ ಎಂದೇ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ನಂಜನಗೂಡು ಸುಕ್ಷೇತ್ರ ಆಧ್ಯಾತ್ಮಿಕ ಪುಣ್ಯ ಭೂಮಿ ಅಷ್ಟೇ ಅಲ್ಲದೆ, ನಾಡಿನ ಸಾಂಸ್ಕೃತಿಕ ಪರಂಪರೆಗೆ ನೀಡಿರುವ ಅತ್ಯಮೂಲ್ಯ ಕೊಡುಗೆ. ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಪರಶುರಾಮ ತಪಸ್ಸು ಗೈದ ಪುಣ್ಯಸ್ಥಳ. ಚೋಳ ವಂಶದ ರಾಜೇಂದ್ರ ಚೋಳ ನಿರ್ಮಿಸಿರುವ ಶ್ರೀಕಂಠೇಶ್ವರ ದೇವಸ್ಥಾನದ ಶಿಲ್ಪಕಲೆ ಜಗತ್ತಿಗೆ ಸಾರುತ್ತಿದೆ. ನಂಜನಗೂಡಿನ ಹಿಂದಿನ ಸಾಧಕರ ಕೊಡುಗೆ ಸ್ಮರಿಸುವುದರ ಜತೆಗೆ ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಹ ಕರ್ತವ್ಯ ಪ್ರಜ್ಞಾವಂತರ ಮೇಲಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಆಸಕ್ತ ಸಮಾನ ಮನಸ್ಕ ಗೆಳೆಯರನ್ನು ಒಳಗೊಂಡ ಸಾಂಸ್ಕೃತಿಕ ಕಲಾ ಬಳಗ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಬಳಗದ ಗೌರವ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಕಂಬ್ರಳ್ಳಿ ನಾಗಪ್ಪ, ಕಾರ್ಯಾಧ್ಯಕ್ಷರಾಗಿ ಶಾಂತಮಲ್ಲಪ್ಪ, ಉಪಾಧ್ಯಕ್ಷರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಪರಶಿವಪ್ಪ, ಕಾರ್ಯದರ್ಶಿಯಾಗಿ ಗುರುಮಲ್ಲಪ್ಪ, ಸದಸ್ಯರಾಗಿ ಗುರು ಕೊಡಗಾಪುರ, ರಾಜೇಶ್ ಹೊರೆಯಾಲ, ಬಸವಣ್ಣ ಹೆಗ್ಗಡಹಳ್ಳಿ, ವಕೀಲ ಕಡಜೆಟ್ಟಿ ಮಹೇಶ್, ಮಹದೇವಸ್ವಾಮಿ, ಬೊಮ್ಮಲಾಪುರ ಶಿವಕುಮಾರ್, ಮುಳ್ಳೂರು ಮನೀಶ್ ಅವರನ್ನು ಆಯ್ಕೆ ಮಾಡಲಾಯಿತು.