ಜಿಲ್ಲೆ

ಶಿರಹಟ್ಟಿಯಲ್ಲಿ ಹೂಗಾರ ಸಮಾಜ ರಚನೆ

ಶಿರಹಟ್ಟಿ: ಜನನದಿಂದ ಮರಣದವರೆಗೂ ಹೂವುಗಳು ಅವಶ್ಯಕವಿದ್ದು, ಅವುಗಳನ್ನು ಸಕಾಲಕ್ಕೆ ಪೂರೈಸುವ ಹೂಗಾರ ಸಮಾಜದವರನ್ನು ನಾವು ಮರೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶ್ರೀ ಜ. ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಪಟ್ಟಣ ಫಕೀರೇಶ್ವರ ಸಂಸ್ಥಾನಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ವಿಶ್ವಗುರು ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶಿವಶರಣ ಹೂಗಾರ ಮಾದಯ್ಯನವರು ಒಬ್ಬರು. ಅಂದಿನಿಂದ ಇಂದಿನವರೆಗೂ ಪ್ರತಿ ಹಿಂದುಗಳ ಮನೆಯವರಿಗೆ ಪೂಜೆ ಮತ್ತಿತರ ಕಾರ್ಯಕ್ರಮಗಳಿಗೆ ಹೂವು ಮತ್ತು ಹಸಿರು ಪತ್ರಿ ನೀಡುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಇದೀಗ ತಾಲೂಕಿನಲ್ಲಿ ಹೂಗಾರ ಸಮಾಜ ರಚನೆಯಾಗಿದ್ದು ಖುಷಿ ನೀಡಿದೆ ಎಂದರು.

ಶ್ರೀ ಜ. ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸಂಪ್ರದಾಯದ ಮೂಲವೃತ್ತಿಯಾದ ಹೂ ನೀಡುವ ಕಾಯಕದೊಂದಿಗೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಣಿಯಾಗುವತ್ತ ಗಮನ ನೀಡಬೇಕು. ಹೂಗಾರ ಸಮಾಜದವರು ಸಂಘಟಿತರಾಗಿ, ಆರ್ಥಿಕವಾಗಿ ಸಬಲತೆ ಹೊಂದಬೇಕು. ಅಂದಾಗ ಮಾತ್ರ ರಾಜ್ಯದಲ್ಲಿಯೂ ಬಲಿಷ್ಟವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಹೂಗಾರ ಸಮಾಜದ ತಾಲೂಕಾಧ್ಯಕ್ಷ ಡಾ.ಶರಣಪ್ಪ ಹೂಗಾರ, ಗೌರವಾಧ್ಯಕ್ಷ ಫಕೀರಪ್ಪ ಹೂಗಾರ, ಉಪಾಧ್ಯಕ್ಷ ಬಸಪ್ಪ ಹೂಗಾರ, ಗುರುಪಾದಪ್ಪ ಹೂಗಾರ, ಮೌನೇಶ ಹೂಗಾರ, ಮುತ್ತು ಹೂಗಾರ, ವೀರಪ್ಪ ಹೂಗಾರ, ಕೆ.ಎ. ಬಳಿಗೇರ, ಇತರರಿದ್ದರು.