ಜಿಲ್ಲೆ

ಏಕ ಗವಾಕ್ಷಿ ಮೂಲಕ ಸಾಲ ಮರುಪಾವತಿಗೆ ಅನುವು ಕಲ್ಪಿಸಿ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ ರೈತರ ಸಾಲವನ್ನು ಏಕ ಗವಾ ಮೂಲಕ (ಒನ್​ ಟೈಮ್​ ಸೆಟ್ಲಮೆಂಟ್​) ಮಾಡಲು ಅನುಮತಿ ನೀಡುವಂತೆ ಕಿಸಾನ ಜಾಗೃತಿ ವಿಕಾಸ ಸಂ ಮಂಗಳವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ವೀರನಗೌಡ ನಾಡಗೌಡರ, ಧ್ರುವಕುಮಾರ ಹೂಗಾರ, ಶಂಕರಗೌಡ ಪಾಟೀಲ ಹಲವರು ಇದ್ದರು.

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ ರೈತರ ಸಾಲವನ್ನು ಏಕ ಗವಾಕ್ಷಿ ಮೂಲಕ (ಒನ್​ ಟೈಮ್​ ಸೆಟ್ಲಮೆಂಟ್​) ಮಾಡಲು ಅನುಮತಿ ನೀಡುವಂತೆ ಕಿಸಾನ ಜಾಗೃತಿ ವಿಕಾಸ ಸಂ ಮಂಗಳವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
"ರೈತರ ಸಾಲ ಮರುಪಾವತಿಗೆ ಕೆಲವು ಬ್ಯಾಂಕ್​ಗಳ ಏಕ ಗವಾಕ್ಷಿ ಮೂಲಕ ಪಾವತಿಸಲು ಸನುಮತಿ ನೀಡಿದೆ. ಆದರೆ, ಹಲವು ಬ್ಯಾಂಕುಗಳು ರೈತರಿಗೆ ತೊಂದರೆ ನೀಡುತ್ತೀವೆ. ಕೋವಿಡ್​ ನಂತರ ಸತತವಾಗಿ ಮೂರು ವರ್ಷಗಳಿಂದ ಸರಿಯಾಗಿ ಬೆಳೆ ಬರದೇ, ಬೆಳೆ ಬಂದು ಸರಿಯಾದ ಮಾರುಕಟ್ಟೆ ಬೆಲೆ ಇಲ್ಲದೇ ರೈತರು ಸಂಕಷ್ಟದಲ್ಲಿ ಸಿಲುಕಿರುತ್ತಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈತರ ಬೆನ್ನಿಗೆ ನಿಲ್ಲಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ವೀರನಗೌಡ ನಾಡಗೌಡರ, ಧ್ರುವಕುಮಾರ ಹೂಗಾರ, ಶಂಕರಗೌಡ ಪಾಟೀಲ, ಬಸವರಾಜ ನವಲಗುಂದ, ಭರತ ಕೊರ್ಲಹಳ್ಳಿ ಹಲವರು ಇದ್ದರು.