ಲೊಕ್ಕನಹಳ್ಳಿಯಲ್ಲಿ ಜಮೀನೊಂದಕ್ಕೆ ಕಾಡಾನೆ ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿರುವುದು. 
ಜಿಲ್ಲೆ

ಜಮೀನಿಗೆ ಕಾಡಾನೆ ದಾಳಿ ಮಾಡಿ ಫಸಲು ನಾಶ

ಎಂ.ರವಿ

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಜಮೀನೊಂದಕ್ಕೆ ಬುಧವಾರ ತಡರಾತ್ರಿ ಕಾಡಾನೆಯೊಂದು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿದೆ.

ಗ್ರಾಮದ ಶಾಂತಮ್ಮ ಎಂಬುವರು ಒಂದೂವರೆ ಎಕರೆಯಲ್ಲಿ ಮುಸುಕಿನ ಜೋಳದ ಫಸಲನ್ನು ಬೆಳೆದಿದ್ದು, ತೆನೆ ಕಟ್ಟುವ ಹಂತಕ್ಕೆ ಬಂದಿತ್ತು. ಆದರೆ ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ಫಸಲನ್ನು ತಿಂದು ನಾಶಪಡಿಸಿದೆ. ಜತೆಗೆ ನೀರಾವರಿ ಪರಿಕರಗಳನ್ನು ಹಾನಿಗೊಳಿಸಿದೆ. ಇದರಿಂದ ಲಕ್ಷಾಂತರ ರೂ ನಷ್ಟವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸುವುದರ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಜತೆಗೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ರೈತೆ ಶಾಂತಮ್ಮ ಒತ್ತಾಯಿಸಿದ್ದಾರೆ.