ಜಿಲ್ಲೆ

ಜೀವ ಸಂಕುಲ ಉಳಿವಿಗೆ ಅರಣ್ಯವೇ ಕವಚ

ಲಕ್ಷ್ಮೇಶ್ವರ: ಜೀವ ಸಂಕುಲದ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುವ ಪರಿಸರದ ರಕ್ಷಣೆ ನಿರ್ಲಕ್ಷಿಸಿದರೆ ಮನುಷ್ಯ ಸಂಕಷ್ಟದ ಸುಳಿಗೆ ಸಿಲುಕುತ್ತಾನೆ ಎಂದು ಪಟ್ಟಣದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ ಹೇಳಿದರು.

ಗುರುವಾರ ಪಟ್ಟಣದ ಸೋಮೇಶ್ವರ ದೇವಾಲಯ ಆವರಣದಲ್ಲಿ ಸೋಮೇಶ್ವರ ದೇವಸ್ಥಾನ ಭಕ್ತರ ಕಮಿಟಿ, ಜೆಸಿಐ, ಭಾರತೀಯ ಕಿಸಾನ್ ಸಂಘ, ಇನ್ನರ್ ವ್ಹೀಲ್ ಕ್ಲಬ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೋಮೇಶ್ವರ ದೇವಸ್ಥಾನ ಭಕ್ತರ ಕಮಿಟಿ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ, ಇನ್ನರ್ ವ್ಹೀಲ್ ಕ್ಲಬ್‌ನ ಮಾಲಾದೇವಿ ದಂದರಗಿ, ಜೆಸಿಐನ ಲಕ್ಷ್ಮೀ ಹಂಗನಕಟ್ಟಿ ಮಾತನಾಡಿದರು. ಸುಲೋಚನಾ ಜವಾಯಿ, ಬಸವರಾಜ ಅರಳಿ, ರೈತ ಸಂಘದ ಟಾಕಪ್ಪ ಸಾತಪುತೆ, ಐ.ಬಿ. ಜಕ್ಕನಗೌಡ್ರ, ರಾಘವೇಂದ್ರ ಪೂಜಾರ, ಮಂಜುಳಾ ಸತ್ಯಪ್ಪನವರ, ಡಾ. ಹೂವಿನ ಇತರರಿದ್ದರು.