Forestry factory priority 
ಜಿಲ್ಲೆ

ಅರಣ್ಯ ವೃದ್ಧಿ ಕಾರ್ಖಾನೆ ಆದ್ಯತೆ

Vijayapura - Desk - Doddanagouda Gudihindin

ಮಹಾಲಿಂಗಪುರ: ಸಮೀಪದ ಗೋದಾವರಿ ಬಯೋರಿಫೈನರೀಸ್ ಡಿಸ್ಟಿಲರಿ ವಿಭಾಗದ ಆವರಣದಲ್ಲಿ ಬಾಗಲಕೋಟೆ ಜಿಲ್ಲಾ ಪರಿಸರ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಗುರುವಾರ 50 ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಭಕ್ಷಿ ಮಾತನಾಡಿ, ಕಾರ್ಖಾನೆ ಆವರಣದಲ್ಲಿ 12 ಎಕರೆ ಜಾಗದಲ್ಲಿ ಸುಮಾರು ಹತ್ತರಿಂದ ಹದಿನೈದು ಸಾವಿರ ಸಸಿಗಳನ್ನು ನೆಡುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನು ಸಾಮಾಜಿಕ ಅರಣ್ಯವಾಗಿ ಬೆಳೆಸಲಾಗುವುದು ಎಂದರು.

ಕಾರ್ಖಾನೆ ಸಿಟಿಒ ದಿನೇಶ ಶರ್ಮಾ, ಇಂಜಿನಿಯರಿಂಗ್ ವಿಭಾಗದ ಜಿಎಂ ವಿ.ಕೆ. ಕಿಲಾರಿ, ಫೈನಾನ್ಸ್ ವಿಭಾಗದ ಜಿಎಂ ಎಂ.ಕೆ. ಚಾವುಸ, ಡಿಸ್ಟಿಲರಿ ವಿಭಾಗದ ಡಿಜಿಎಂ ಡಿ.ಎನ್. ಪಾಟೀಲ, ಪಿಆರ್ ವಿಭಾಗದ ಎಜಿಎಂ ರವೀಂದ್ರ ಬಾಗೋಜಿ, ಉತ್ಪಾದನೆ ವಿಭಾಗದ ಎಜಿಎಂ ಕೃಷ್ಣಾ ಗೌಡರ, ಡಿಎಂ ಆರ್.ವಿ. ಸೋನವಾಲಕರ, ಪ್ರಕಾಶಚಂದ್ರ ನಾಯಿಕಲ್ ಇದ್ದರು.