ಜಿಲ್ಲೆ

ದಾರಿ ತಪ್ಪಿ ಬಂದ ಜಿಂಕೆ ಮತ್ತೆ ಕಾಡಿಗೆ

ಶಿವಮೊಗ್ಗ: ಅರಣ್ಯದಂಚಿನಿಂದ ದಾರಿ ತಪ್ಪಿ ಶಿವಮೊಗ್ಗ ನಗರದೊಳಕ್ಕೆ ಬಂದು ಇಲ್ಲಿನ ಜನದಟ್ಟಣೆ, ವಾಹನ ಸಂಚಾರ ಕಂಡು ಕಂಗಾಲಾಗಿದ್ದ ಜಿಂಕೆಯೊಂದು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಕಾಲಿಕ ಕ್ರಮದಿಂದ ಮತ್ತೆ ಕಾಡಿಗೆ ಮರಳಿದೆ.

ಗುರುವಾರ ಬೆಳಗ್ಗೆ ವಿದ್ಯಾನಗರದ ಕರ್ಲಟ್ಟಿ ಕೆರೆ ಸಮೀಪ ಲಕ್ಷ್ಮಮ್ಮ ಎಂಬುವವರ ಮನೆಯ ಕಾಂಪೌಂಡ್ ಬಳಿ ಜಿಂಕೆಯನ್ನು ಕಂಡ ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ. ದಾರಿ ತಪ್ಪಿ ಬೆದರಿದ್ದ ಜಿಂಕೆ ಅಲ್ಲಿಂದ ಕದಲದೇ ಹಾಗೇ ನಿಂತಿತ್ತು. ಆ ವೇಳೆಗಾಗಲೇ ಬೆದರಿದ ಜಿಂಕೆಯ ಫೋಟೋ ವೈರಲ್ ಆಗಿತ್ತು. ಸಾರ್ವಜನಿಕರು ಉಂಬ್ಳೆಬೈಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ಸುರಕ್ಷಿತವಾಗಿ ಕೊಂಡೊಯ್ದು ಕಾಡಿಗೆ ಬಿಟ್ಟರು.