ಜಿಲ್ಲೆ

ಅರಣ್ಯ ಹಕ್ಕು ಹೋರಾಟಕ್ಕೆ 34 ವರ್ಷ

Uttara Kannada - Subash Hegde
ಈ ಎಲ್ಲ ವಿಚಾರಗಳ ಕುರಿತು ಕಳೆದ 33 ವರ್ಷಗಳಲ್ಲಿ 5000 ಕ್ಕೂ ಮಿಕ್ಕಿ ಸಂಘಟನಾತ್ಮಕ ಹೋರಾಟ, ಪಾದಯಾತ್ರೆ, ಅರಣ್ಯ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಡನೆಸಲಾಗಿದೆ. ಮಾತ್ರವಲ್ಲ ದಶಲಕ್ಷ್ ಗಿಡ ನೆಡುವ ಅಭಿಯಾನ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.ಅರಣ್ಯ ಹಕ್ಕು ಮಂಜೂರಿಗೆ ಸಂಬಂಧಪಟ್ಟಂತೆ ಕಳೆದ ಮೂರು ದಶಕದಿಂದ 13 ಬಾರಿ ಅರ್ಜಿ ಸ್ವೀಕರಿಸಲಾಗಿದೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 18 ವರ್ಷಗಳಾಗಿವೆ. ಜಿಲ್ಲೆಯ 80 ಸಾವಿರ ಜನರಿಂದ ಅರ್ಜಿ ಸ್ವೀಕರಿಸಲಾಗಿದೆ. ಇಂದಿಗೂ ಜಿಲ್ಲೆಯ ಅರ್ಹರಿಗೆ ಹಕ್ಕು ಮರೀಚಿಕೆಯಾಗಿದೆ. 1978 ರ ಪೂರ್ವದ 2,513 ಅರಣ್ಯವಾಸಿಗಳಿಗೆ ಮಂಜೂರಿ ಅರ್ಹತೆ ಇದ್ದರೂ, ಹಕ್ಕು ಪತ್ರ ವಿತರಣೆವಾಗಿಲ್ಲ. ಅರಣ್ಯಸಂರಕ್ಷಣಾ ಕಾಯಿದೆ 1980 ಪೂರ್ವದ 6,156 ಕ್ಕಿಂತ ಮಿಕ್ಕಿ ಸಾಗುವಳಿದಾರರಿಗೆ ಖಾಯಂ ಲಾಗಣಿ ಹಕ್ಕು ಪತ್ರ ದೊರೆತಿಲ್ಲ. ಮಾರ್ಚ 2015 ರಲ್ಲಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುದಾರರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಸರ್ಕಾರದ ಹಂತದಲ್ಲಿನ ಪರಿಶೀಲನೆಗೆ ಇಂದಿನವರೆಗೂ ಪ್ರಗತಿ ಹೊಂದಿಲ್ಲ ಎಂದು ಅವರು ಸಮಸ್ಯೆ ವಿವರಿಸಿದ್ದಾರೆ.ಜಿಲ್ಲೆಯ ಮುಕ್ಕಾಲು ಭಾಗದ ಜನರು ಅರಣ್ಯವಾಸಿಗಳಾಗಿದ್ದಾರೆ. ಜೀವನ ಪೂರ್ತಿ ದುಡಿದ ಹಣವನ್ನ ಅರಣ್ಯ ಭೂಮಿ ಅಭೀವೃದ್ದಿಗೆ ವ್ಯಯ ಮಾಡಿದ ಜಿಲ್ಲೆಯ 88,543 ಅರಣ್ಯವಾಸಿ ಕುಟುಂಬಗಳು ಹಕ್ಕಿನ ನಿರೀಕ್ಷೆಯಲ್ಲಿವೆ. ಆದರೆ, ಅಂಥ ಕುಟುಂಬಗಳು ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ದೌಜನ್ಯ ಎದುರಿಸುತ್ತಿರುವುದು ಒಂದೆಡೆಯಾದರೆ, ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಲು ಸುಪ್ರೀಂ ಕೊರ್ಟ್ ನೀಡಿರುವ ನಿರ್ದೆಶನದ ಕಾನೂನಿನ ತೂಗುಗತ್ತಿಯೂ ಅವರ ಮೇಲಿದೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಅರಣ್ಯ ಕಕ್ಕು ಪಡೆಯಲು ಈ ಹಿಂದೆ ಸಂಘಟಿಸಲಾದ ಹೋರಾಟದ ನೀತಿ, ಭೂಮಿ ಹಕ್ಕಿಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಆಡಳಿತಾತ್ಮಕ ನಿರ್ಣಯಗಳು. ಸುಪ್ರೀಂ ಕೊರ್ಟ್ನಲ್ಲಿ ಜರುಗಿಸುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೋರಾಟಗಾರರ ವೇದಿಕೆಯ ನಿಲುವು ಮತ್ತು ಮುಂದಿನ ಹೋರಾಟದ ರೂಪು-ರೇಷೆಯನ್ನು ಈ ಸಭೆಯಲ್ಲಿ ನಿರ್ಧರಿಸಲಾಗುವುದೆಂದು ಅವರು ತಿಳಿಸಿದ್ದಾರೆ.ಶಿರಸಿ: ಅರಣ್ಯವಾಸಿಗಳ ಭೂಮಿಯ ಹಕ್ಕಿನ ಸಂಬಂಧ ನಡೆಸುತ್ತಿರುವ ಸಾಂಘಿಕ ಕಾನೂನಾತ್ಮಕ ಹೋರಾಟವು 34 ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13 ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಕಾರ್ಯಾಲಯದಲ್ಲಿ ಅರಣ್ಯವಾಸಿಗಳ ಚಿಂತನಕೂಟ ನಡೆಯಲಿದೆ ಎಂದು ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ತಿಳಿಸಿದ್ದಾರೆ. ಅರಣ್ಯ ಹಕ್ಕು ಹೋರಾಟಗಾರರ ಸಮಿತಿ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಪರಿಸರ ಸಂಘಟನೆಗಳು ಅರಣ್ಯ ಹಕ್ಕು ಕಾಯ್ದೆ ಮೌಲ್ಯವನ್ನು ಪ್ರಶ್ನಿಸಿ ಮತ್ತು ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸಂಭಂಧ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಸಾರ್ವಜಿನಿಕ ಹಿತಾಸಕ್ತಿಯ ಅರ್ಜಿಯು ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಹೋರಾಟಗಾರರ ವೇದಿಕೆಯು 2019 ಸೆ. ನಲ್ಲಿ ಈ ಅರ್ಜಿ ವಿಚಾರಣೆಯಲ್ಲಿ ಪಕ್ಷಗಾರನಾಗಿ ಸೇರಿಕೊಂಡಿದೆ. ಸೆ.14 ರಂದು ಅಂತಿಮ ವಿಚಾರಣೆ ನಡೆಯಲಿದೆ.