ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯ ಕ್ರೀಡಾ ಮೈದಾನದಲ್ಲಿ ಶಾಸಕ ಸಿ.ಎಸ್.ನಾಡಗೌಡರು ಪತ್ನಿ ಸುವರ್ಣಾದೇವಿ ಸಮೇತ ಗಿಡ ನೆಟ್ಟು ನೀರೆರೆದರು. ಡಾ.ವೀರೇಶ ಇಟಗಿ, ಎಂ.ಎಸ್.ಗಡೇದ, ನಾಗಭೂಷಣ ನಾವದಗಿ, ಮಹಿಬೂಬ ಗೊಳಸಂಗಿ, ಆರ್.ಐ.ಹಿರೇಮಠ ಇತರರಿದ್ದರು. 
ಜಿಲ್ಲೆ

ಅರಣ್ಯ ಸಂಪತ್ತು ಹೆಚ್ಚಿಸಲು ಬದ್ಧ

ಮುದ್ದೇಬಿಹಾಳ: ಎಲ್ಲೆಡೆ ಶ್ರೀಗಂಧದ ಮರಗಳನ್ನು ಬೆಳೆಸಿ ಅರಣ್ಯ ಸಂಪತ್ತು ಹೆಚ್ಚಿಸಲು ಆದ್ಯತೆ ನೀಡುವುದಾಗಿ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಹುಡ್ಕೋ ಬಡಾವಣೆಯ ಕ್ರೀಡಾ ಮೈದಾನದಲ್ಲಿ ಹಸಿರು ತೋರಣ ಗೆಳೆಯರ ಬಳಗ, ಅರಣ್ಯ ಇಲಾಖೆ ಆಶ್ರಯದಲ್ಲಿ ತಮ್ಮ 67ನೇ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪತ್ನಿ ಸುವರ್ಣಾದೇವಿ ಸಮೇತರಾಗಿ ಗಿಡ ನೆಟ್ಟು ನೀರೆರೆದು ಅವರು ಮಾತನಾಡಿದರು.

ಮೈಸೂರು ಸ್ಯಾಂಡಲ್ ಸೋಪ್, ಪೌಡರ್, ಗಂಧದ ಎಣ್ಣೆ ತಯಾರಿಸಲು ಶ್ರೀಗಂಧದ ಮರಗಳ ಅವಶ್ಯಕತೆ ಹೆಚ್ಚಾಗಿದೆ. ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುತ್ತಿದ್ದರು. ಆದರೆ ಈಗ ಬೆಳೆಯುವುದು ಕಡಿಮೆಯಾಗಿದೆ. ಬೇರೆ ಕಡೆಯಿಂದ ಶ್ರೀಗಂಧ ತರಿಸಿಕೊಂಡು ಉತ್ಪನ್ನ ಮುಂದುವರಿಸಲಾಗಿದೆ. ನನ್ನ ಅಧ್ಯಕ್ಷತೆಯ ಸಾಬೂನು ಮತ್ತು ಮಾರ್ಜಕ ನಿಗಮವನ್ನು ಮೊದಲಿನಂತೆ ಉತ್ತುಂಗ ಸ್ಥಿತಿಗೆ ಕೊಂಡೊಯ್ಯಲು ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಜನ್ಮದಿನ ಸ್ಮರಣಾರ್ಥ ಶ್ರೀಗಂಧ, ರಕ್ತ ಚಂದನ, ನೇರಳೆ ಸೇರಿ 20ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಅರಣ್ಯ ಇಲಾಖೆ ಅಧಿಕಾರಿ ಗಿರೀಶ ಅಲಕುಡೆ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ಬಿ.ಎಸ್.ಮೇಟಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಸಂಚಾಲಕ ಮಹಾಬಲೇಶ್ವರ ಗಡೇದ, ಮಲ್ಲಿಕಾರ್ಜುನ ಬಾಗೇವಾಡಿ, ವೆಂಕನಗೌಡ ಪಾಟೀಲ, ಸುರೇಶ ಕಲಾಲ, ಬಿ.ಎ.ನಾಡಗೌಡ, ಎಂ.ಬಿ.ನಾವದಗಿ, ಅಬ್ದುಲ್‌ಗಪೂರ ಮಕಾನದಾರ, ಬಿ.ಕೆ.ಬಿರಾದಾರ, ಪ್ರಭುರಾಜ ಕಲಬುರ್ಗಿ, ಶರಣು ಸಜ್ಜನ, ರಾಜು ಕರಡ್ಡಿ, ಗುರುಸ್ವಾಮಿ ಬೂದಿಹಾಳಮಠ, ವೈ.ಎಚ್.ವಿಜಯಕರ, ಪಿಂಟು ಸಾಲಿಮನಿ, ಬಸವರಾಜ ಮುದ್ನೂರ, ಸಂಗಣ್ಣ ಬಿರಾದಾರ, ರಾಚಯ್ಯ ಹಿರೇಮಠ, ಗೋಪಿ ಮಡಿವಾಳರ, ಪರಶುರಾಮ ಪವಾರ, ಬುಡ್ಡೇಸಾ ಚಪ್ಪರಬಂದ, ಅರಣ್ಯ ಇಲಾಖೆಯ ಅಶೋಕ ಚವ್ಹಾಣ, ಅನಿಲ ಚವ್ಹಾಣ, ರಾಜೇಂದ್ರ ಹುನ್ನೂರ, ಮತ್ಯುಂಜಯ ಬಿದರಕುಂದಿ ಇತರರಿದ್ದರು.

ರಕ್ತದಾನ, ನೇತ್ರ ತಪಾಸಣೆ: ಶಾಸಕರ ಜನ್ಮದಿನ ಅಂಗವಾಗಿ ಕೆಪಿಸಿಸಿ ವೈದ್ಯಕೀಯ ಘಟಕದಿಂದ ಡಾ.ವಿಜಯಕುಮಾರ ಗೂಳಿ ಇನ್ನಿತರರ ನೇತೃತ್ವದಲ್ಲಿ ರಕ್ತದಾನ ಶಿಬಿರ, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯಿಂದ ನೇತ್ರ ಉಚಿತ ತಪಾಸಣಾ ಶಿಬಿರ ನಡೆಯಿತು. ಡಾ.ವಿಜಯಕುಮಾರ ಗೂಳಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿವೃತ್ತ ಯೋಧ ಆರ್.ಐ.ಹಿರೇಮಠ ಸೇರಿ 18 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ರಕ್ತದಾನಿಗಳನ್ನು ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. 100ಕ್ಕೂ ಹೆಚ್ಚು ಜನ ನೇತ್ರ ತಪಾಸಣೆ ಮಾಡಿಸಿಕೊಂಡರು. ಪತ್ನಿ ಸುವರ್ಣಾದೇವಿ ಸಮೇತ ಶಿಬಿರಕ್ಕೆ ಭೇಟಿ ನೀಡಿದ್ದ ಶಾಸಕರು ಆಯೋಜಕರು, ರಕ್ತದಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.