ಜಿಲ್ಲೆ

ಕಾಲು ಸಂಕ ಹಾಕಲು ಬಿಡದ ಅರಣ್ಯಾಧಿಕಾರಿಗಳು

ಕಾರವಾರ:ಮೂಲ ನಿವಾಸಿಗಳಿಗೆ ಕಿರುಕುಳ ನೀಡುತ್ತಿರುವ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಜೊಯಿಡಾ ತಾಲೂಕಿನ ಅರಣ್ಯ ಅತಿಕ್ರಮಣದಾರರು ಎಸಿ ಜಯಲಕ್ಷ್ಮೀ ರಾಯಕೋಡ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.


ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ ಅಣಶಿ ವಲಯದ ಅರಣ್ಯಾಧಿಕಾರಿ ಪ್ರಕಾಶ ದೊಡ್ಮನಿ, ಡಿಆರ್‌ಎಫ್‌ಒ ಶ್ರೀಧರ ಸಜ್ಜನ ಮಳೆಗಾಲದಲ್ಲಿ ಕಾಲು ಸಂಕ ಹಾಕಲು ಅನುಮತಿ ನೀಡುತ್ತಿಲ್ಲ.

ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗ್ರಾಮದ ದ್ವೀಪದಂತಾಗುತ್ತಿದೆ ಎಂದು ದೂರಿದ್ದಾರೆ.‌

ಅರಣ್ಯಾಧಿಕಾರಿಗಳು ಮನೆಯ ಸಮೀಪ ಹಾಕಲಾದ ಐಬೆಕ್ಸ್ ಬೇಲಿಯ ತಂತಿಗಳನ್ನು ಕೊಂಡೊಯ್ಯುತ್ತಿದ್ದಾರೆ.

ಮೂಲ ನಿವಾಸಿಗಳನ್ನು ಅರಣ್ಯದಿಂದ ಹೊರ ಹಾಕಲು ಯತ್ನಿಸುತ್ತಿದ್ದಾರೆ.

ಈ ಹಿಂದೆ ಬಾರಗದ್ದೆ ಕಾವಲುಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇವರ ಮೇಲಿದ್ದು, ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅವರನ್ನು ತಕ್ಷಣ ವರ್ಗಾವಣೆ ಮಾಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದ ಪ್ರಮುಖರಾದ ಅನಿಲ್ ಗಾವಡಾ, ಚಂದ್ರಕಾಂತ ಗಾವಡಾ, ಗುರುದಾಸ್ ಗಾವಡಾ, ಆಪಾ ಕಾಡಪೊಡಕರ, ದಿನೇಶ್ ವೆಳಿಪ, ಮಂಜುನಾಥ ವೆಳಪ ಮುಂತಾದವರು ಮನವಿ ಸಲ್ಲಿಕೆ ಸಂದರ್ಭದಲ್ಲಿದ್ದರು.