ಜಿಲ್ಲೆ

ಅರಣ್ಯ, ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ

ಮಂಜುನಾಥ ಅಂಗಡಿ

ಧಾರವಾಡ: ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಆಹಾರ, ಔಷಧಿ, ಪ್ರಾಣವಾಯು ಸೇರಿದಂತೆ ಪ್ರತಿಯೊಂದನ್ನು ನೀಡುವ ಅರಣ್ಯ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಆಗಬೇಕು. ಅರಣ್ಯವೇ ನಮ್ಮ ಉತ್ತಮ ಆರೋಗ್ಯದ ಮೂಲ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧಿಶೆ ಕೆ.ಜಿ. ಶಾಂತಿ ಹೇಳಿದರು.
ಅರಣ್ಯ ಇಲಾಖೆಯಿಂದ ನಗರದ ಅರಣ್ಯ ಸಂಕೀರ್ಣದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದ ಸಂವಿಧಾನ ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ನೀಡಿದೆ. ಮೂಲಭೂತ ಹಕ್ಕಿಗಾಗಿ ಒತ್ತಾಯಿಸುವ ನಾವು ಪರಿಸರ, ಸ್ಮಾರಕ, ಅರಣ್ಯ ಸಂರಕ್ಷಣೆಯಂತಹ ಕರ್ತವ್ಯಗಳನ್ನು ಪಾಲಿಸುವ ಬದ್ಧತೆ ತೋರಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ರಕ್ಷಣೆಗೆ ನೇಮಕವಾಗಿದ್ದಾರೆ. ಆದರೆ, ಅರಣ್ಯಗಳ್ಳರು, ಬೇಟೆಗಾರರು, ಒತ್ತುವರಿದಾರರ ಹಾವಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಾಗರಿಕರ ಹಿತಕ್ಕಾಗಿ ತಮ್ಮ ಬದುಕು ಬಲಿ ಕೊಡುತ್ತಿದ್ದಾರೆ. ಸಾರ್ವಜನಿಕರೂ ಅರಣ್ಯ ಕಾಪಾಡುವಲ್ಲಿ ನೈತಿಕ ಜವಾಬ್ದಾರಿ ತೋರಬೇಕು ಎಂದರು.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಽಕಾರಿ ಡಿ. ಯತೀಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಽಕಾರಿ ಸೋನಲ್ ವೃಷ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಎಫ್‌ಒ ಪ್ರದೀಪ ಪವಾರ ಅವರು ಹುತಾತ್ಮ ಅರಣ್ಯ ಅಽಕಾರಿ, ಸಿಬ್ಬಂದಿಯ ಪಟ್ಟಿ ಪ್ರಸ್ತುತಪಡಿಸಿದರು.
ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಡಾ. ಗೋಪಾಲ ಬ್ಯಾಕೋಡ, ಅರಣ್ಯ ಇಲಾಖೆಯ ಅಽಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.