ಜಿಲ್ಲೆ

ಅಕ್ಟೋಬರ್‌ 4 ರಿಂದ ಆಕ್ಷೇಪಣಾ ಪತ್ರ ಅಭಿಯಾನ

Uttara Kannada - Subash Hegde

ಕಾರವಾರ: ಕಾನೂನು ಬಾಹಿರವಾಗಿ ಅರಣ್ಯ ಅತಿಕ್ರಮಣದಾರರ ಅರ್ಜಿಗಳನ್ನು ತಿರಸ್ಕರಿಸಿರುವುದನ್ನು ಖಂಡಿಸಿ ಅಕ್ಟೋಬರ್ 4 ರಂದು ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಅಭಿಯಾನ ಪ್ರಾರಂಭಿಸಲಾಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ತಿಳಿಸಿದರು.

ಅರಣ್ಯ ಹಕ್ಕು ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯ ಸೂಚಿಸಿದ ಪುನರ್ ಪರಿಶೀಲನೆಯ ಕಾಲಾವಽ ಮುಕ್ತಾಯವಾಗಿದೆ. ರಾಜ್ಯ ಸರ್ಕಾರ ಯಾವುದೇ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡದೇ ಆ ಕಾರ್ಯ ಮುಕ್ತಾಯವಾಗಿದೆ ಎಂದು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ.

ರಾಜ್ಯದಲ್ಲಿ 2.39 ಲಕ್ಷಕ್ಕೂ ಅಽಕ, ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಽ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿದೆ. ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡಿಲ್ಲ. ವಿಚಾರಣೆ ಮಾಡಿಲ್ಲ. ಮುಖ್ಯವಾಗಿ ಪುನರ್ ಪರಿಶೀಲನೆ ಮಾಡಲು ಬೇಕಾದ ಪೂರ್ಣ ಪ್ರಮಾಣದ ಉಪ ವಿಭಾಗೀಯ ಸಮಿತಿಗಳೇ ಅಸ್ತಿತ್ವದಲ್ಲಿಲ್ಲ.

ರಾಜ್ಯ ಮುಖ್ಯ ಕಾರ್ಯದರ್ಶಿಗಳು ಸಚಿವರಿಗೂ ಮಾಹಿತಿ ನೀಡದೇ ಕೇಂದ್ರಕ್ಕೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ. ಹಾಗಾಗಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ. ಅಲ್ಲದೇ ಆಕ್ಷೇಪಣಾ ಅಭಿಯಾನ ಮಾಡಲಿದ್ದೇವೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪು ಬಂದರೆ ಉತ್ತರ ಕನ್ನಡದಲ್ಲಿ 88 ಸಾವಿರಕ್ಕೂ ಅಽಕ ಕುಟುಂಬಗಳು ನಿರಾಶ್ರಿತರಾಗಲಿವೆ. ಅರಣ್ಯ ಹಕ್ಕು ಕಾಯ್ದೆಯ ಅಡಿಯೇ ಹಕ್ಕು ಕೊಡಲು ಸಾಕಷ್ಟು ಅವಕಾಶವಿದೆ. ಆದರೆ, ರಾಜ್ಯದ ಅಧಿಕಾರಿಗಳಿಗೆ ಕಾನೂನಿನ ಜ್ಞಾನದ ಕೊರತೆ ಇದೆ. ಜನಪ್ರತಿನಿಧಿಗಳಿಗೆ ಇಚ್ಛಾ ಶಕ್ತಿಯ ಕೊರತೆ ಇದೆ ಎಂದು ಅಸಮಾಧಾನ ಹೊರ ಹಾಕಿದರು. ಮಂಜುನಾಥ ಮರಾಠಿ, ಭೀಮ್ಶಿ ವಾಲ್ಮೀಕಿ, ರಾಘವೇಂದ್ರ ನಾಯ್ಕ ಕವಂಚೂರು, ಅಮೋಘ ಮಲ್ಲಾಪುರ, ಮಹಾಬಲೇಶ್ವರ ಕುಣಬಿ ಜೊಯಿಡಾ ಸುದ್ದಿಗೋಷ್ಠಿಯಲ್ಲಿದ್ದರು.