ಜಿಲ್ಲೆ

ಗದ್ದೆಯಲ್ಲಿ ಕಾಡಾನೆ ಗದ್ದಲ, ಭತ್ತ, ಗೋವಿನಜೋಳ ಬೆಳೆ ನಾಶ

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಹೊರವಲಯದ ಗದ್ದೆಗಳಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಭತ್ತ ಹಾಗೂ ಗೋವಿನಜೋಳ ಗದ್ದೆಗಳಲ್ಲಿ ಸಂಚರಿಸಿ ಬೆಳೆ ನಾಶ ಪಡಿಸಿದೆ.

ಸನವಳ್ಳಿ ಗ್ರಾಮದ ಫಕೀರಪ್ಪ ಬೋಕೆ ಹಾಗೂ ಬಸವಂತಪ್ಪ ಬೋಕೆ ಎಂಬುವರ ಗದ್ದೆಗೆ ದಾಳಿ ಮಾಡಿರುವ ಕಾಡಾನೆ ಭತ್ತದ ಬೆಳೆಯನ್ನು ತುಳಿದು ನಾಶ ಪಡಿಸಿದೆ. ಹಲವು ರೈತರ ನಾಟಿ ಗದ್ದೆಗಳಲ್ಲಿ ಸಂಚರಿಸಿರುವ ಕಾಡಾನೆ ತುಳಿತಕ್ಕೆ ಬೆಳೆ ಹಾನಿಯಾಗಿದೆ. ಶುಕ್ರವಾರ ರೈತರು ಗದ್ದೆಗಳಿಗೆ ಹೋಗಿ ನೋಡಿದಾಗ ಕಾಡಾನೆ ಬೆಳೆ ಹಾನಿ ಮಾಡಿರುವುದು ಕಂಡು ಬಂದಿದೆ.

ಕಾಡಾನೆಯ ದಾಳಿಯ ಬಗ್ಗೆ ಉಪವಲಯ ಅರಣ್ಯ ಅಧಿಕಾರಿಗೆ ಕರೆ ಮಾಡಿ ತಿಳಿಸಿದರೂ ಸ್ಥಳಕ್ಕೆ ಬರದಿರುವ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದ ನಂತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.