ಬಾಳೆಹೊನ್ನೂರು ಸಮೀಪದ ಕುಂಬರಕೋಡು ಗ್ರಾಮದಲ್ಲಿ ಕಾಡಾನೆ ತೆಂಗಿನ ಮರ ಬೀಳಿಸಿರುವುದು. 
ಜಿಲ್ಲೆ

ಕುಂಬರಕೋಡಿನಲ್ಲಿ ಕಾಡಾನೆ ಹಾವಳಿ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ಕುಂಬರಕೋಡು ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಆರಂಭವಾಗಿದ್ದು, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದೆ.

ಗುರುವಾರ ರಾತ್ರಿ ಗ್ರಾಮದ ಯೋಗೀಶ್ ಎಂಬುವರ ತೋಟಕ್ಕೆ ನುಗ್ಗಿ ಕಾಫಿ, ಅಡಕೆ, ತೆಂಗಿನ ಮರಗಳನ್ನು ಉರುಳಿಸಿ ಹಾನಿ ಮಾಡಿದ್ದು, ಕೃಷಿಕರು ಭಯಗೊಂಡಿದ್ದಾರೆ.