ಜಿಲ್ಲೆ

ನಿತ್ರಾಣಗೊಂಡಿದ್ದ ಆನೆಗೆ ಶ್ರೂಶೂಷೆ ಮಾಡಿದ ಅರಣ್ಯ ಇಲಾಖೆ

ಗಂಗಾಧರ ಬಿ ವಿ

ರಾಮನಗರ: ಬಿಸಿಲ ಬೇಗೆ ತಾಳಲಾರದೆ ನಿತ್ರಾಣಗೊಂಡಿದ್ದ ಗಂಡಾನೆ ಆನೆಯೊಂದನ್ನು ರಕ್ಷಿಸಿ ಮತ್ತೆ ಕಾಡಿಗೆ ಅಟ್ಟಿರುವ ಟನೆ  ಕನಕಪುರದ ಕೋಡಿಹಳ್ಳಿ ಬಳಿ ನಡೆದಿದೆ. 


ಕನಕಪುರ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯ ಬೆಟ್ಟಹಳ್ಳಿ ವಾಡೆ ಕೂತಗಳೆ ಗ್ರಾಮದ ಚನ್ನೇಗೌಡ ಎಂಬುವರ ಜಮೀನು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡತ್ತೆ ಇದ್ದು, ಶುಕ್ರವಾರ ಆಹಾರ ಅರಸುತ್ತಾ ಜಮೀನಿಗೆ ಬಂದಿದೆ. ಆದರೆ ಬಿಸಿಲ ಬೇಗೆ ತಾಳಲಾರದೆ ನಿತ್ರಾಣಗೊಂಡು ಜಮೀನಿನಲ್ಲಿಯೇ ಸಿಲುಕಿದೆ. 


ಈ ವೇಳೆ ಮಾಹಿತಿ ಪಡೆದ ಅರಣ್ಯ ಇಲಾಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಬೆಟ್ಟಹಳ್ಳಿವಾಡೆ ಸಮೀಪದ  ಸಿ ಬ್ಲಾಕ್ನಲ್ಲಿ ನಿರ್ಮಿಸಿರುವ ಇಟಿಪಿಯಲ್ಲಿ ಇಳಿಯುವಾಗ ಕುಸಿದು ಬಿದ್ದಿದೆ. 


ನಂತರ ಪಶುವೈಧ್ಯಾಧಿಕಾರಿಗಲ ಶುಶ್ರೂಷೆ ಮಾಡಿದ್ದು, ಆನೆ ಚೇತರಿಸಿಕೊಂಡಿದೆ. ಕೆಲ ಹೊತ್ತಿನ ನಂತರ ಆನೆ ಕಾಡಿಗೆ ತೆರಳಿದೆ. 
ಈ ಕಾರ್ಯಾಚರಣೆಯಲ್ಲಿ ಡಿಎ್ಓ ರಾಮಕೃಷ್ಣಪ್ಪ ಎಂ, ಎಸಿಎಫ್ ವಿ.ಗಣೇಶ್ , ನಿಜಾಮುದ್ದೀನ್, ಆರ್ಎಫ್ ಓ ದಾಳೇಶ್, ಎಆರ್ಎಫ್ ಓ ರಾಜಶೇಖರ್, ಅರಣ್ಯ ಪಾಲಕರಾದ ಚಂದ್ರು, ನರಸಿಂಹ ಮುಂತಾದವರು ಪಾಲ್ಗೊಂಡಿದ್ದರು.