ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಹುಲಿಗಳ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ ಅರಣ್ಯ ಸಿಬ್ಬಂದಿ. 
ಜಿಲ್ಲೆ

ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಮಾದೇಶ್ ತಿ.ನರಸೀಪುರ

ಗುಂಡ್ಲುಪೇಟೆ: ಸಮೀಪದ ಮುಂಟೀಪುರ ರಸ್ತೆಯಲ್ಲಿ ಫೆಬ್ರವರಿ ಮೊದಲನೇ ವಾರದಲ್ಲಿ ವಾಹನಗಳಿಗೆ ಕಾಣಿಸಿಕೊಂಡಿದ್ದ ಹುಲಿಗಳು ಇಲ್ಲಿಗೆ ಬಂದಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕೂಂಬಿಂಗ್ ನಡೆಸಿ ಪಟಾಕಿ ಸಿಡಿಸಿ ಹುಲಿಗಳನ್ನು ಕಾಡಿಗಟ್ಟಲು ಪ್ರಯತ್ನ ಮಾಡಿದ್ದಾರೆ. ಈಗಲೂ ಮತ್ತೊಮ್ಮೆ ಕೂಂಬಿಂಗ್ ನಡೆಸಲಾಗುವುದು ಎಂದು ಬಫರ್ ವಲಯದ ಉಪ ವಲಯಾರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.