ಜಿಲ್ಲೆ

ವಿಜಯವಾಣಿ ವರದಿಗೆ ಎಚ್ಚೆತ್ತು ಅಪಾಯಕಾರಿ ಮರ ತೆರವು

ವಿನಯ ಹೆಗಡೆ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ-ಗೋಳಿಮಕ್ಕಿ ರಸ್ತೆಯ ನೇರ್ಲಮನೆ ಸಮೀಪ ರಸ್ತೆಯ ಪಕ್ಕದ ಧರೆಯ ತುದಿಗೆ ಇರುವ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಒಣಗಿದ ಮರವನ್ನು ಅರಣ್ಯ ಇಲಾಖೆ ತೆರವು ಮಾಡಿ ವಾಹನ ಸವಾರರು ನಿರಾತಂಕವಾಗಿ ಸಂಚಾರ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಗೋಳಿಮಕ್ಕಿ-ನೇರ್ಲಮನೆ ಸಮೀಪ ರಸ್ತೆ ಪಕ್ಕದ ಎತ್ತರದ ಧರೆ ಅಂಚಿಗೆ ಬೇರಿನ ಆಶ್ರಯದಲ್ಲಿ ಒಣಗಿದ ಮರವೊಂದು ಈಗಲೋ ಆಗಲೋ ಬೀಳುವಂತಿದ್ದು ಅಪಾಯ ಸಂಭವಿಸುವ ಮುನ್ನವೇ ಮರ ತೆರವುಗೊಳಿಸಬೇಕು ಅರಣ್ಯ ಇಲಾಖೆ ಈ ಕುರಿತು ಕ್ರಮಕೈಗೊಳ್ಳುವಂತೆ ಜುಲೈ.15ರಂದು ವಿಜಯವಾಣಿ ವರದಿ ಮಾಡಿತ್ತು.

ಇದಕ್ಕೆ ಸ್ಪಂದಿಸಿದ ಜಾನ್ಮನೆ ವಲಯ ಅರಣ್ಯಾಧಿಕಾರಿಗಳು ಭಾನುವಾರ (ಜುಲೈ.16ರಂದು) ಮರವನ್ನು ತೆರವು ಮಾಡಿದೆ.