ಆಲ್ದೂರು ಸಮೀಪದ ಕೆರೆಹಕ್ಲು ಎಸ್ಟೇಟ್‌ನಲ್ಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಒಂಟಿ ಸಲಗ.  
ಜಿಲ್ಲೆ

ವಿದ್ಯುತ್ ಸ್ಪರ್ಶಕ್ಕೆ ಕಾಡಾನೆ ಸಾವು

Shivamogga - Desk - Vinayakumar D B

ಆಲ್ದೂರು: ಕಂಚಿನಕಲ್ ದುರ್ಗ ಸಮೀಪದ ಕೆರೆಹಕ್ಲು ಕಾಫಿ ತೋಟವೊಂದರಲ್ಲಿ ಭಾನುವಾರ ಒಂಟಿ ಸಲಗ ಮೃತಪಟ್ಟಿದ್ದು, ವಿದ್ಯುತ್ ಶಾಕ್ ಕಾರಣ ಎಂದು ಶಂಕಿಸಲಾಗಿದೆ.

ಮೃತಪಟ್ಟಿರುವ ಭಾರಿ ಗಾತ್ರದ ಒಂಟಿ ಸಲಗಕ್ಕೆ 35 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆನೆಯ ಸೊಂಡಲಿನ ಭಾಗದಲ್ಲಿ ಗಾಯವಾಗಿ ರಕ್ತ ಸೋರುತ್ತಿದೆ. ಆನೆ ತೋಟದಲ್ಲಿದ್ದ ಹಲಸಿನ ಕಾಯಿ ತಿನ್ನಲು ಮರದ ಕೊಂಬೆಯನ್ನು ಮುರಿದಿದ್ದು, ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿಯಿಂದ ಕೊಂಬೆಗೆ ವಿದ್ಯುತ್ ಹರಿದಿದ್ದರಿಮದ ಆನೆ ಮೃತಪಟ್ಟಿದೆ ಎನ್ನಲಾಗಿದೆ. ಮರದ ಕೊಂಬೆಯ ಜತೆ ವಿದ್ಯುತ್ ಕಂಬವೂ ವಾಲಿಕೊಂಡಿದೆ.
ಡಿಎ್ಒ ರಮೇಶ್‌ಬಾಬು, ಎಸಿಎ್ ರಘು, ಉಪವಲಯ ಅರಣ್ಯಅಧಿಕಾರಿ ಗೌತಮ್, ಭದ್ರಾ ವನ್ಯಜೀವಿ ವೈದ್ಯಾಧಿಕಾರಿ ವಿಶಾಖ, ಸಿಬ್ಬಂದಿ ಕಿಶೋರ್, ಆನೆ ಕಾರ್ಯಪಡೆ ಸಿಬ್ಬಂದಿ ಇದ್ದರು.