ಹನುಮಸಾಗರ ಸಮೀಪದ ಜಹಗೀರ ಗುಡದೂರು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಅರಣ್ಯ ಇಲಾಖೆಯಿಂದ ಸಸಿಗಳನ್ನು ವಿತರಣೆ ಮಾಡಲಾಯಿತು. ಉಪ ವಲಯ ಅರಣ್ಯಾಧಿಕಾರಿ ಲಾಲಸಾಬ್ ಸೂಳಿಬಾವಿ, ಗಸ್ತು ಅರಣ್ಯ ಪಾಲಕರಾದ ಕಳಕಪ್ಪ ಬ್ಯಾಳಿ, ಗ್ರಾಪಂ ಅಧ್ಯಕ್ಷ ಹನಮಂತ ಕರಕನಕಪ್ಪನವರ, ಶಂಕರಗೌಡ ಅಕ್ಕೇರಿ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ

Gangavati - Desk - Veeresh S Ullagaddi

ಹನುಮಸಾಗರ: ಅರಣ್ಯದಿಂದ ಮನುಕುಲಕ್ಕೆ ಬಹಳಷ್ಟು ಅನುಕೂಲವಿದ್ದು, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ನಿಮ್ಮ ಕುಟುಂಬ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ಲಾಲಸಾಬ್ ಸೂಳಿಬಾವಿ ಹೇಳಿದರು.

ಪ್ರತಿ ಗ್ರಾಪಂಗೆ 1000 ವಿವಿಧ ಬಗೆಯ ಸಸಿಗಳನ್ನು ವಿತರಣೆ

ಸಮೀಪದ ಜಹಗೀರ ಗುಡದೂರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಸಸಿ ವಿತರಿಸಿ ಮಾತನಾಡಿ, ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ತನಗೆ ಅರವಿಲ್ಲದಂತೆ ಸಂಕಷ್ಟಕ್ಕೆ ಸಿಲುಕುತ್ತಾನೆ. ಮನೆ ಮುಂದೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು, ಪೋಷಣೆ ಮಾಡಬೇಕು. ಮರಗಳನ್ನು ಬೆಳೆಸುವುದರಿಂದ ಅಂತರ್ಜಲಮಟ್ಟ ವೃದ್ಧಿಯಾಗಿ ನೀರಿನ ಸಮಸ್ಯೆ ದೂರವಾಗುತ್ತದೆ. ಅರಣ್ಯ ಇಲಾಖೆಯಿಂದ ಪ್ರತಿ ಗ್ರಾಪಂಗೆ 1000 ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷ ಹನಮಂತ ಕರಕನಕಪ್ಪನವರ, ಗಸ್ತು ಅರಣ್ಯ ಪಾಲಕರಾದ ಕಳಕಪ್ಪ ಬ್ಯಾಳಿ, ಶಂಕರಗೌಡ ಅಕ್ಕೇರಿ, ಅರಣ್ಯ ವೀಕ್ಷಕರಾದ ದೇವಪ್ಪ, ಶೇಕಪ್ಪ, ವಿಠ್ಠಲ, ಮಲ್ಲಪ್ಪ ಹಾಗೂ ಶಿಕ್ಷಕರಿದ್ದರು.