ಮಡಿಕೇರಿ:
ನೇಮಕಾತಿಗೆ ಸಂಬAಧಿಸಿದAತೆ ಸರ್ಕಾರದ ಬದಲಾಗಿರುವ ನೀತಿಯಿಂದ ಅರಣ್ಯ ಪದವೀಧರರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಹುದ್ದೆಗಳಲ್ಲಿ ಬಿಎಸ್‌ಸಿ ಅರಣ್ಯ ಪದವೀಧರರಿಗೆ ಮೀಸಲು ಕೊಡಬೇಕು ಎಂದು ಆಗ್ರಹಿಸಿ ರಾಜ್ಯದ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿAದ ಪ್ರತಿಭಟನೆ ನಡೆಸುತ್ತಿದ್ದಾರೆ. 4 ವರ್ಷಗಳ ಕಾಲ 8 ಸೆಮಿಸ್ಟರ್‌ಗಳಲ್ಲಿ ಕಲಿತು ಪದವಿ ಪಡೆದು ಹೊರ ಬರುವಾಗ ತಾವು ಕಲಿತ ವಿಷಯದಲ್ಲಿ ಕೆಲಸ ಸಿಗುವ ಖಾತರಿಯೇ ಇವರಿಗೆ ಇಲ್ಲವಾಗಿದೆ.
ರಾಜ್ಯದಲ್ಲಿ ಕೊಡಗಿನ ಪೊನ್ನಂಪೇಟೆ, ಶಿವಮೊಗ್ಗದ ಸಿರಸಿ ಹಾಗೂ ಇರುವಕ್ಕಿಯಲ್ಲಿ ಕೇವಲ 3 ಅರಣ್ಯ ಕಾಲೇಜುಗಳಿವೆ. ಮೂರೂ ಕಾಲೇಜುಗಳಲ್ಲಿ ಒಟ್ಟು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿವರ್ಷವೂ 180ರಷ್ಟು ಅರಣ್ಯ ಪದವೀಧರರು ಪದವಿ ಪಡೆದು ಕಾಲೇಜುಗಳಿಂದ ಹೊರಬರುತ್ತಾರೆ. ಬಿಎಸ್‌ಸಿ ಕÊಷಿ, ರೇಷ್ಮೆ, ಬಿವಿಎಸ್‌ಸಿ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ವÊತ್ತಿಪರ ಪದವಿ ಪಡೆದುಕೊಳ್ಳುವವರಿಗೆ ಸಂಬAಧಪಟ್ಟ ಆಯಾಯ ಇಲಾಖೆಗಳಲ್ಲೇ ಉದ್ಯೋಗದಲ್ಲಿ ಶೇ. 100ರಷ್ಟು ಮೀಸಲಾತಿ ಇದೆ. ಆದರೆ ಸರ್ಕಾರದ ಬದಲಾದ ನೇಮಕಾತಿ ನಿಯಮಗಳ ಪ್ರಕಾರ ಅರಣ್ಯ ಪದವೀಧರರಿಗೆ ಈ ಸೌಲಭ್ಯ ಇಲ್ಲ.
2018ರ ಸರ್ಕಾರದ ನೇಮಕಾತಿ ಅಧಿಸೂಚನೆಯಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಸಹಾಯಕ ವಲಯ ಅರಣ್ಯಾಧಿಕಾರಿಗಳಾದ (ಡಿಆರ್‌ಎಫ್‌ಒ) ಇಲಾಖಾ ಅಭ್ಯರ್ಥಿಗಳಿಗೆ ಶೇ. 50ರಷ್ಟು ಮೀಸಲಾತಿಯನ್ನು ಮತ್ತು ಉಳಿದ ಶೇ. 50ರಷ್ಟು ನೇರ ನೇಮಕಾತಿಯನ್ನು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಇಲಾಖಾ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಪದವಿ ಹೊಂದಿದವರಿಗೆ ಶೇ. 100ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಈ ಮೀಸಲು ಸಂಪೂರ್ಣವಾಗಿ ಅರಣ್ಯ ಪದವೀಧರರಿಗೆ ಸಿಗಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆ. ಈ ಬಗ್ಗೆ ವಿಜಯವಾಣಿ ಓದುಗರು ಮತ್ತು ಅರಣ್ಯ ಕಾಲೇಜು ವಿದ್ಯಾರ್ಥಿಗಳು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಅರಣ್ಯ ಕಾಲೇಜು ಪದವೀಧರರಿಗೆ ಅರಣ್ಯ ಪದವಿ ಮುಗಿಸಿದ ನಂತರ ನೇರ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಅರಣ್ಯ ಮಹಾವಿದ್ಯಾಲಯ ಸ್ಥಾಪನೆಯ ಉದ್ದೇಶವೇ ಅರಣ್ಯ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ಸಿದ್ಧಪಡಿಸುವುದಾಗಿದೆ. ಪರಿಸರ ಉಳಿಯಬೇಕೆಂದರೆ ಅರಣ್ಯ ಉಳಿಯಬೇಕಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಅರಣ್ಯ ಜ್ಞಾನ ಅತ್ಯಗತ್ಯ. ವಿದ್ಯಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ.
ಶೋಭಾ, ತಟ್ಟಳ್ಳಿ ಹಾಡಿ ಮುಖಂಡರು
ಆಸಕ್ತಿಯಿಂದ ಪದವಿ ಪಡೆಯುವುದರೊಂದಿಗೆ ಅರಣ್ಯದ ಕುರಿತು ಜ್ಞಾನ ಪಡೆದಂಥ ವರ್ಗಕ್ಕೆ ನೇಮಕಾತಿಯ ಹೊಸ ನಿಯಮ ಅನ್ಯಾಯ ಎಸಗಿದಂತಾಗುತ್ತದೆ. ಅರಣ್ಯ ಇಲಾಖೆಯಲ್ಲಿ ಹುದ್ದೆ ಪಡೆಯುವ ಇತರೆ ಪದವೀಧರÀರು ಅರಣ್ಯದ ಬಗ್ಗೆ ಸಮರ್ಪಕ ಮಾಹಿತಿ, ನಿಯಮ ತಿಳಿಯಲು ಹಲವು ವರ್ಷಗಳು ಬೇಕಾಗುತ್ತದೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಉದ್ದೇಶದಿಂದ ಅರಣ್ಯ ಪದವಿಯನ್ನು ಶ್ರಮ ವಹಿಸಿ ಪಡೆದ ಶಿಕ್ಷಣ ವ್ಯರ್ಥ ಎಂಬ ಭಾವನೆ ಮೂಡಿಸುವಂತಿದೆ. ಸರ್ಕಾರ ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ಅರಣ್ಯ ಪದವೀಧರರಿಗೆ ಆಗುವ ಅನ್ಯಾಯ ತಪ್ಪಿಸಬೇಕಿದೆ.
ಕೆ. ಪುಣ್ಯ ಬೆಳ್ಳಿಯಪ್ಪ, ಕಾಕೋಟುಪರಂಬು.
ಯಾವುದೇ ಇಲಾಖೆಗೆ ಸಂಬAಧಪಟ್ಟAತೆ ಇಂಥÀದ್ದೇ ಪದವಿ ಎಂದು ನಿಗದಿ ಮಾಡಿದ ಮೇಲೆ ಆ ಪದವಿಯನ್ನು ಪಡೆದವರು ತಮ್ಮ ಇಲಾಖೆ ಅಥವಾ ವಿಷಯಕ್ಕೆ ಸಂಬAಧಪಟ್ಟAಥ ಅಪಾರ ಜ್ಞಾನ ಗಳಿಸಿರುತ್ತಾರೆ. ಪ್ರಾಯೋಗಿಕ ತರಗತಿಗಳಲ್ಲೂ ಸಾಕಷ್ಟು ಕಲಿತಿರುತ್ತಾರೆ. ಎಂಜಿನಿಯರ್ ಕ್ಷೇತ್ರ ಒಂದನ್ನೇ ತೆಗೆದುಕೊಂಡರೂ ಅಲ್ಲಿ ವಿವಿಧ ವಿಭಾಗಗಳಿರುತ್ತವೆ. ಸಿವಿಲ್ ಮಾಡಿದವರು ಕಂಪ್ಯೂಟರ್ ಅಥವಾ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ . ಅಂತೆಯೇ ಯಾವುದೇ ಭಿನ್ನ-ಭಿನ್ನ ಕಲಿಕೆಗೆ ಭಿನ್ನ-ಭಿನ್ನ ಉದ್ಯೋಗಗಳು ನಿಗದಿಯಾಗಿರುವುದರಿಂದ ಅರಣ್ಯ ಇಲಾಖೆಗೆಂದು ನಿಗದಿಯಾಗಿರುವ ಹುದ್ದೆಗಳಿಗೆ ಆ ವಿಭಾಗದಲ್ಲಿಯೇ ಪದವೀಧರರಾದವರನ್ನು ನಿಯುಕ್ತಿ ಮಾಡಿಕೊಳ್ಳುವುದು ಸೂಕ್ತ.
ಡಿ. ಸುಜಲಾ ದೇವಿ, ಪ್ರಾಂಶುಪಾಲರು. ಸುಪ್ರಜ ಗುರುಕುಲ, ಶನಿವಾರಸಂತೆ
ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳಲ್ಲಿ ಆಯಾ ವಿಷಯಕ್ಕೆ ಸಂಬAಧಪಟ್ಟ ಸಂಪೂರ್ಣ ಜ್ಞಾನ ಇರುವವರನ್ನು ನೇಮಕ ಮಾಡಿಕೊಂಡು ಬಂದಿರುವುದು ಸ್ವಾಗತಾರ್ಹ ವಿಷಯ. ಆದರೆ ಇದೀಗ ಅರಣ್ಯ ಇಲಾಖೆಯ ಹುದ್ದೆಗಳಲ್ಲಿ ಮೀಸಲಾತಿ ತೆಗೆದಿರುವುದರಿಂದ ಅರಣ್ಯ ವಿಷಯದಲ್ಲಿ ಜ್ಞಾನವಿಲ್ಲದರಿಗೆ ನೌಕರಿ ದೊರಕಿ ಸಮಸ್ಯೆಗೆ ದಾರಿಯಾಗುವುದಲ್ಲದೆ, ಅರಣ್ಯ ಕಾಲೇಜು ಪದವೀಧರರಿಗೆ ಉದ್ಯೋಗದ ವಿಚಾರದಲ್ಲಿ ಅನ್ಯಾಯವಾಗುವುದು ಖಂಡಿತ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಭವಿಷ್ಯದಲ್ಲಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾದೀತು.
ಮೇಡತನ ರಶ್ಮಿ, ಗೃಹಿಣಿ, ಬಲಮುರಿ ಗ್ರಾಮ
ಅರಣ್ಯ ಪದವೀಧರರಿಗೆ ಕಡ್ಡಾಯವಾಗಿ ಅರಣ್ಯ ಇಲಾಖೆಯ ಹುದ್ದೆಗಳಿಗೆ ಕನಿಷ್ಠ ಶೇ. 50ರಷ್ಟು ಹುದ್ದೆಗಳನ್ನು ಮೀಸಲು ಇಡಬೇಕು. ಇಲ್ಲದಿದ್ದರೆ ಅರಣ್ಯ ಕಾಲೇಜುಗಳ ಅವಶ್ಯಕತೆ ಏನಿದೆ ? ಮೆಡಿಕಲ್ ಓದಿದವರು ಮಾತ್ರ ಡಾಕ್ಟರ್ಸ್ ಆಗಲು ಸಾಧ್ಯ ಎಂಬುದು ಸತ್ಯವಾಗಿರುವಾಗ ಅರಣ್ಯ, ಕೃಷಿ, ತೋಟಗಾರಿಕಾ ಪದವೀಧರರನ್ನೇ ಆಯಾಯ ಇಲಾಖೆಯ ಹುದ್ದೆಗಳಿಗೆ ಆಯ್ಕೆ ಮಾಡಬೇಕು. ಪದವಿ ಪಡೆದ ಮಕ್ಕಳ ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು.
ಎಚ್. ಎಸ್. ಸಮೃದ್, ಕೃಷಿ ಪದವೀಧರ, ಹಿರಿಕರ ಗ್ರಾಮ
ನಾವು ಅರಣ್ಯ ವಿಷಯದಲ್ಲಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ವ್ಯಾಸಂಗ ಮಾಡುತ್ತಿದ್ದೇವೆ. ಆದರೆ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಹುದ್ದೆಗಳಿಗೆ ನೇಮಕವಾಗುವಾಗ ನಮ್ಮ ವಿದ್ಯಾರ್ಹತೆ ಹಾಗೂ ಸಮುದಾಯದ ಮೀಸಲಾತಿ ನೀತಿಯನ್ನು ಸರಿಯಾಗಿ ಪರಿಗಣಿಸಲಾಗುತ್ತಿಲ್ಲ. ಇದು ನಮ್ಮ ಭವಿಷ್ಯಕ್ಕೆ ಮಾಡುವ ಅನ್ಯಾಯ. ಅರಣ್ಯ ಇಲಾಖೆಯ ಉದ್ಯೋಗಗಳಲ್ಲಿ ಮೀಸಲಾತಿ ನಿಯಮಗಳನ್ನು ಸ್ಪಷ್ಟವಾಗಿ ಜಾರಿಗೊಳಿಸಬೇಕು. ಅರಣ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ನೀಡಬೇಕು. ನಾವು ಅರಣ್ಯ ವಿಜ್ಞಾನವನ್ನು ಆಯ್ಕೆ ಮಾಡಿದ್ದು ಪ್ರಕೃತಿ ಸಂರಕ್ಷಣೆಗೆ. ಆದರೆ ಉದ್ಯೋಗಾವಕಾಶಗಳಲ್ಲಿ ನಮ್ಮ ಅಕಾಡೆಮಿಕ್ ಶ್ರಮಕ್ಕೆ ಸಮಾನ ಗೌರವ ಸಿಗುತ್ತಿಲ್ಲ. ಮೀಸಲಾತಿ ನೀತಿಯನ್ನು ಸರಿಯಾಗಿ ಅನುಸರಿಸದಿದ್ದರೆ, ಸಾಮಾಜಿಕ ನ್ಯಾಯದ ಉದ್ದೇಶವೇ ವ್ಯರ್ಥವಾಗುತ್ತದೆ.
ಬಿ.ವಿ. ಲತಾ, ದ್ವಿತೀಯ ಬಿ.ಎಸ್ಸಿ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
ಮಳೆ ಸುರಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಏಕೆಂದರೆ ಇದು ಕೇವಲ ಪ್ರತಿಭಟನೆ ಅಲ್ಲ. ನಮ್ಮ ಭವಿಷ್ಯದ ಹೋರಾಟ. ಮಳೆಯ ತೇವದಲ್ಲಿ ನಮ್ಮ ಉತ್ಸಾಹ ಮತ್ತಷ್ಟು ಪ್ರಬಲವಾಯಿತು. ಹನಿಗಳು ನಮ್ಮ ಮುಖದ ಮೇಲೆ ಬೀಳುತ್ತಿದ್ದರೂ, ನಮ್ಮ ಮನದ ಧೈರ್ಯ ಮತ್ತು ಹಂಬಲವನ್ನು ಯಾರೂ ನಿಲ್ಲಿಸಲಿಲ್ಲ. ನಮ್ಮ ನಂಬಿಕೆ ಸ್ಪಷ್ಟ. ನಾವು ಪ್ರಕೃತಿಯನ್ನು ಕಾಪಾಡುವವರು. ಆದರೆ ನಮ್ಮ ಜೀವನವನ್ನು ಯಾರು ಕಾಪಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ತನಕ ಈ ಹೋರಾಟ ಮುಂದುವರಿಯುತ್ತದೆ.
ಕೆ. ಐಶ್ವರ್ಯ, ದ್ವಿತೀಯ ಬಿ.ಎಸ್ಸಿ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
ಸರ್ಕಾರದ ಅಸಮರ್ಪಕ ನೀತಿಯಿಂದ ಅರಣ್ಯ ಪದವೀಧರರಿಗೆ ನೀಡಲಾಗುತ್ತಿದ್ದ ಉದ್ಯೋಗದ ಭರವಸೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಅರಣ್ಯ ಇಲಾಖೆ ನೇಮಕಾತಿಗಳಲ್ಲಿ ಅರಣ್ಯ ಪದವೀಧರರ ಸ್ಥಾನ ಕುಗ್ಗುತ್ತಿರುವುದರಿಂದ, ವಿದ್ಯಾರ್ಥಿಗಳು ಡಿಆರ್‌ಎಫ್‌ಒ, ಆರ್‌ಎಫ್‌ಒ ಹಾಗೂ ಎಸಿಎಫ್ ಹುದ್ದೆಗಳಿಗೆ ಕನಿಷ್ಠ ಅರ್ಹತೆ ಬಿ.ಎಸ್ಸಿ ಫಾರೆಸ್ಟಿç ಆಗಬೇಕು ಎಂಬ ಏಕ ಬೇಡಿಕೆಯನ್ನು ಮುಂದಿಟ್ಟಿದ್ದೇವೆ. ಅರಣ್ಯ ಸಂರಕ್ಷಿಸಲು ತಾಂತ್ರಿಕವಾಗಿ ತರಬೇತಿ ಪಡೆದ ಯುವಕರೇ ಯೋಗ್ಯರು ಎಂಬ ನಂಬಿಕೆಯಿAದ ಈ ಹೋರಾಟ ನಡೆಯುತ್ತಿದೆ. ಸರ್ಕಾರ ವಿದ್ಯಾರ್ಥಿಗಳ ಧ್ವನಿಗೆ ಸ್ಪಂದಿಸಿ, ಅರಣ್ಯ ಶಿಕ್ಷಣಕ್ಕೆ ನ್ಯಾಯ ಕೊಡಬೇಕಿದೆ.
ಎಂ.ಬಿ. ದೀಕ್ಷಿತ್, ತೃತೀಯ ಬಿ.ಎಸ್ಸಿ, ಅರಣ್ಯ ಮಹಾವಿದ್ಯಾಲಯ, ಪೋನ್ನಂಪೇಟೆ
ಅರಣ್ಯ ಪದವಿ ಕೇವಲ ವಿದ್ಯಾಭ್ಯಾಸವಲ್ಲ. ಇದು ಪ್ರಕೃತಿಯ ಸಂರಕ್ಷಣೆ, ಪರಿಸರ ಸಮತೋಲನ ಹಾಗೂ ಸಮಾಜದ ಶಾಶ್ವತ ಅಭಿವೃದ್ಧಿಗೆ ನಾವು ನೀಡುವ ಪ್ರತಿಜ್ಞೆಯಾಗಿದೆ. ಅರಣ್ಯ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರುವಂಥ ತಾಂತ್ರಿಕ ಜ್ಞಾನ ಮತ್ತು ನಿಸ್ವಾರ್ಥ ಸೇವಾ ಮನೋಭಾವವನ್ನು ನಮ್ಮಂಥ ವಿದ್ಯಾರ್ಥಿಗಳು ಇಲ್ಲಿ ಪಡೆಯುತ್ತಾರೆ. ಈ ಶ್ರಮ ಮತ್ತು ಅರ್ಹತೆಗೆ ತಕ್ಕ ಮಾನ್ಯತೆ ಸರ್ಕಾರದಿಂದ ದೊರೆಯುವುದು ಅತ್ಯಂತ ಅಗತ್ಯ. ನಮ್ಮ ಹೋರಾಟ ಕೇವಲ ಹುದ್ದೆ ಅಥವಾ ನೇಮಕಾತಿಗಾಗಿ ಅಲ್ಲ. ಅದು ನಮ್ಮ ವಿದ್ಯಾರ್ಹತೆಯ ಗೌರವ ಮತ್ತು ಅರಣ್ಯ ಕ್ಷೇತ್ರದ ಭವಿಷ್ಯಕ್ಕಾಗಿ.
ಎಸ್. ನಯನಾ, ತೃತೀಯ ಬಿ.ಎಸ್ಸಿ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
ಅರಣ್ಯವನ್ನು ಕಾಪಾಡುವ ಹೊಣೆ ಹೊತ್ತಿರುವ ಯುವ ಪದವೀಧರರು ಇಂದು ತಮ್ಮ ಹಕ್ಕಿಗಾಗಿ ರಸ್ತೆಗಿಳಿದಿದ್ದಾರೆ. ಪ್ರಕೃತಿಯ ಅಸ್ತಿತ್ವಕ್ಕಾಗಿ ಜೀವಪಣ ಇಟ್ಟಿರುವ ಇವರು ಸರ್ಕಾರದಿಂದ ನ್ಯಾಯಯುತ ಗುರುತಿನ ನಿರೀಕ್ಷೆಯಲ್ಲಿ ನಿಂತಿದ್ದಾರೆ. ನಾವು ಅರಣ್ಯವನ್ನು ಕಾಪಾಡುತ್ತೇವೆ, ಆದರೆ ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಬಂದಿದೆಯೇ? ಎಂಬ ಪ್ರಶ್ನೆ ಪ್ರತಿಯೊಬ್ಬರ ಮನದಲ್ಲೂ ಮೂಡುತ್ತಿದೆ. ಈ ಹೋರಾಟವು ಅರಣ್ಯ ಪದವೀಧರರ ಹೃದಯದ ಧ್ವನಿಯಾಗಿದ್ದು, ಅದರ ಪ್ರತಿಧ್ವನಿಯು ಸಮಾಜದ ನ್ಯಾಯಬದ್ಧತೆ ಮತ್ತು ಪರಿಸರ ಪ್ರಜ್ಞೆಯ ಗಂಭೀರ ಸಂಕೇತವಾಗಿದೆ.
ರಂಜು, ತೃತೀಯ ಬಿ.ಎಸ್ಸಿ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ