ಬೆಳ್ತಂಗಡಿ: ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡುಬರುವ ವಿಷರಹಿತ ’ಸಾರಿಬಾಳ’ ಹಾವು (Foresten cat Snake ) ತಾಲೂಕಿನ ಧರ್ಮಸ್ಥಳ ಗ್ರಾಮದ ದಾಮೋದರ ಎಂಬುವರ ಮನೆಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಸಾರಿಬಾಳ ಅಳಿವಿನಂಚಿನಲ್ಲಿರುವ ವಿಷರಹಿತ ಹಾವು. ಇದರ ಸಂತತಿಯೂ ಕಡಿಮೆಯಾಗಿದೆ. ಸ್ನೇಕ್ ಅಶೋಕ್ 6 ವರ್ಷಗಳ ಹಿಂದೆ ಲಾಯಿಲ ಗ್ರಾಮದ ಕಿಂಡಾಜೆ ಎಂಬಲ್ಲಿ ಸಾರಿಬಾಳ ಹಾವನ್ನು ಮೊದಲ ಬಾರಿ ಹಿಡಿದ್ದಿದ್ದರು. ಬಳಿಕ ಶುಕ್ರವಾರ ಧರ್ಮಸ್ಥಳದಲ್ಲಿ ಎರಡನೇ ಬಾರಿ 7 ಅಡಿ ಉದ್ದದ ಹಾವು ಪತ್ತೆಯಾಗಿದೆ.