ಜಿಲ್ಲೆ

ಕಾಡಾನೆ ದಾಳಿ ನಷ್ಟ

ಪ್ರಸಿನ್ ಕೆ.ಆರ್

ನಾಪೋಕ್ಲು: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳು ಮಂಗಳವಾರ ರಾತ್ರಿ ಭತ್ತದ ಗದ್ದೆಗಳಿಗೆ ದಾಳಿ ಮಾಡಿ ಪೈರು, ತೋಟದಲ್ಲಿದ್ದ ಕಾಫಿ, ಅಡಕೆ ಗಿಡಗಳನ್ನು ನಾಶಪಡಿಸಿವೆ.

ಅಪ್ಪುಮಣಿಯಂಡ ರಘು ಸುಬ್ಬಯ್ಯ ಎಂಬುವರ ಭತ್ತದ ಗದ್ದೆ ಹಾಗೂ ತೋಟದಲ್ಲಿದ್ದ ಕಾಫಿ ಅಡಕೆ ಗಿಡಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.