ಜಿಲ್ಲೆ

ವಿದೇಶ ಪ್ರವಾಸದಿಂದ ಶ್ರೀಗಳು ಸ್ವದೇಶಕ್ಕೆ

ಧನಂಜಯ ಎಸ್.ಹಕಾರಿ.

ಸಿರಿಗೆರೆ: ವಿದೇಶಗಳಲ್ಲಿ ವಚನ ತತ್ವ ಪ್ರಚಾರ ನೀಡಿದ ತರಳಬಾಳು ಮಠದ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,

ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂದು ಬೃಹನ್ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಂದು ತಿಂಗಳ ವಿದೇಶ ಪ್ರವಾಸದಲ್ಲಿದ್ದ ಶ್ರೀಗಳು ಇಂಗ್ಲೆಂಡ್, ಅಮೇರಿಕಾ, ಯುರೋಪ್, ಸ್ಯಾನ್ ಫ್ರಾನ್ಸಿಸ್ಕೋದಿಂದ ಹವಾಯಿ ದ್ವೀಪ, ಚಿಕಾಗೋ,

ಬಹಾಮ ದ್ವೀಪ, ಜರ್ಮನಿ, ಆಸ್ಟ್ರಿಯಾ, ಸ್ವಿಟ್ಜರ್‌ಲೆಂಡ್, ಐರ್ಲೆಂಡ್, ದುಬೈ ಮುಂತಾದ ದೇಶಗಳಿಗೆ ತೆರಳಿ ವಚನ ತತ್ವದ ಮಹತ್ವದ ಬಗ್ಗೆ ಮಾತನಾಡಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.