ಜಿಲ್ಲೆ

ಹೊರರಾಜ್ಯ ಕಾರ್ಮಿಕ ಆತ್ಮಹತ್ಯೆ

ಇಂದಿರಾ ಎನ್ ಕೆ

ಕಾಸರಗೋಡು: ಪೊಯಿನಾಚಿ ಸನಿಹದ ಮೈಲಾಟಿಯ ಕೊಯಂಕೊಟ್ಟುಚ್ಚಾಲ್‌ನ ಕ್ವಾರ್ಟರ್ಸ್‌ನಲ್ಲಿ ಹೊರರಾಜ್ಯದ ಕಾರ್ಮಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಘಾಲಯ ನಿವಾಸಿ, ಕೂಲಿ ಕಾರ್ಮಿಕ ಇಲ್ಯಾಸ್ ಆರ್.ಮಾರೋಕ್(36) ಮೃತ ಕಾರ್ಮಿಕ. ಕೆಂಪುಕಲ್ಲಿನ ಕ್ವಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆತ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಸಹಕಾರ್ಮಿಕರು ಕ್ವಾರ್ಟರ್ಸ್‌ಗೆ ತೆರಳಿ ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು.