ಜಿಲ್ಲೆ

ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಲು ಒತ್ತಾಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.


ಮುಡಾ ವಿಚಾರದಲ್ಲಿ ಪ್ರತಿಪಕ್ಷಗಳ ರಾಜಕೀಯ ಕೆಸರೆರಚಾಟ ನೋಡಿ ಜನತೆಗೆ ಬೇಸರವಾಗಿದೆ. ರಾಜ್ಯ ಸರ್ಕಾರದ ವಾಲ್ಮೀಕಿ ಸಮುದಾಯದ ಹಗರಣ ಹಾಗೂ ಮುಡಾ ಹಗರಣ ರಾಜ್ಯದ ಜನರ ನಿದ್ದೆ ಕೆಡಿಸಿದೆ ಎಂದು ಕಿಡಿಕಾರಿದರು.


ಮುಡಾ ಆಯುಕ್ತ ದಿನೇಶ್‌ಕುಮಾರ್ ಅವರನ್ನು ಅಮಾನತು ಮಾಡಿ, ವಿಚಾರಣೆಯನ್ನೂ ಮಾಡಿಲ್ಲ. ಬದಲಿಗೆ ಅವರನ್ನು ಬರೀ ವರ್ಗಾವಣೆ ಮಾಡಿ ಕಳುಹಿಸಿಕೊಟ್ಟಿರುವುದು ಖಂಡನೀಯ. ಈ ಪ್ರಕರಣ ಬೆಳಕಿಗೆ ಬಂದು 2 ತಿಂಗಳಾದರೂ ಇನ್ನೂ ಕ್ರಮ ವಹಿಸದೆ, ಸಿಬಿಐಗೂ ವಹಿಸದೆ ರಾಜ್ಯ ಸರ್ಕಾರ ನಿರ್ಲಕ್ಷೃ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಂಘಟನೆಯ ಮುಖಂಡರಾದ ತೇಜೇಶ್ ಲೋಕೇಶ್‌ಗೌಡ, ಸುರೇಶ್ ಗೋಲ್ಡ್, ಪ್ರಭುಶಂಕರ್, ಶಿವಲಿಂಗಯ್ಯ, ಕುಮಾರ್‌ಗೌಡ, ವರಕೋಡು ಕೃಷ್ಣೇಗೌಡ, ನಾಗರಾಜ್, ಮಂಜುಳಾ, ಪ್ರಜೀಶ್, ಸಿಂಧುವಳ್ಳಿ ಶಿವಕುಮಾರ್, ಭಾಗ್ಯಮ್ಮ ಇನ್ನಿತರರಿದ್ದರು.