ಚಿಕ್ಕಮಗಳೂರು: ನಗರದ ವಾರ್ಡ್-16 ರ ಗೌರಿಕಾಲುವೆ, ನೆಹರು ನಗರ, 60 ಅಡಿ ರಸ್ತೆಯಿಂದ ಉಪ್ಪಳ್ಳಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ-ಸೇತುವೆ ದುರಸ್ತಿಗೆ ಒತ್ತಾಯಿಸಿ ಮಾಂಟಿ ಎಂಜಲ್ಸ್ ಇಂಟರ್ ನ್ಯಾಷನಲ್ ಶಾಲೆ ಆಡಳಿತ ಮಂಡಳಿ ಸದಸ್ಯರು ಮಂಗಳವಾರ ಡಿಸಿ ಮೀನಾ ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಶಾಲೆ ಮುಖ್ಯಸ್ಥ ಜೋಸೆಫ್ ಮ್ಯಾನ್ಯೂವಲ್ ಮಾತನಾಡಿ, ಇದೇ ರಸ್ತೆಯಲ್ಲಿ ಶಾಲೆ ಇದೆ. ರಾಮೇಶ್ವರ ಕೆರೆಯಿಂದ ಬರುವ ನೀರಿಗೆ ಕಾಲುವೆ ಮೇಲೆ ನಿರ್ಮಿಸಿದ ಸೇತುವೆ ಶಿಥಿಲಗೊಂಡು ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಜೀವ ಕೈಯಲ್ಲಿ ಹಿಡಿದು ನಡೆದಾಡಬೇಕಾಗಿದೆ ಎಂದರು.
ಈ ಸೇತುವೆ ಅಕ್ಕ-ಪಕ್ಕದಲ್ಲಿ ಅಕ್ಕಪಕ್ಕದವರು, ನೆರೆಹೊರೆಯವರು ಕಸ ಎಸೆದು ಪರಿಸರ ಮಾಲಿನ್ಯ ಉಂಟುಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ದಾರಿಯಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು, ವಾರ್ಡ್ ಸದಸ್ಯರಿಗೆ ಮನವಿ ನೀಡಿದರೂ ಈ ಕೂಡಲೇ ಸೇತುವೆ ದುರಸ್ತಿ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಡಳಿತ ಮಂಡಳಿ ನಿರ್ದೇಶಕರಾದ ಸ್ಟೀವನ್ ಡಿಸೋಜ, ಶಾನ್‌ಡಿಸೋಜ, ಶಿವಕುಮಾರ್ ಉಪಸ್ಥಿತರಿದ್ದರು.