ಜಿಲ್ಲೆ

ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಒತ್ತಾಯ

ಬಸವರಾಜ ವೀರಪ್ಪ ಗರಗ

ಮುಂಡಗೋಡ: ಹಳಿಯಾಳದಲ್ಲಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೆ ಬಂಧಿಸಬೇಕು ಹಾಗೂ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ವಕೀಲರ ಸಂಘದವರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಹಳಿಯಾಳ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರ ಮೇಲೆ ಗುರುವಾರ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಕೀಲರ ಮೇಲೆ ಪದೇಪದೆ ಹಲ್ಲೆಗಳು ನಡೆಯುತ್ತಿದ್ದು, ಆದ್ದರಿಂದ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಕೀಲರ ಸಂಘಟನೆಗಳು ಉಗ್ರ ಹೋರಾಟ ಮಾಡುತ್ತವೆ ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ವಕೀಲರಾದ ಎಸ್.ಪಿ. ಸಮ್ಮಸಗಿ, ಜಿ.ಎಸ್. ಕಾತೂರ, ಬಿ.ಎಫ್. ಪೂಜಾರ, ಅನ್ನಪೂರ್ಣಾ ಭಟ್, ನಟರಾಜ ಕಾತೂರ, ರಾಜಶೇಖರ ಹುಬ್ಬಳ್ಳಿ, ಇತರರಿದ್ದರು.