ರಸ್ತೆಗೆ ವಾಲಿರುವ ವಿದ್ಯುತ್ ಕಂಬ(1). ಅಪಾಯದಂಚಿನಲ್ಲಿರುವ ಮರ (2)  
ಜಿಲ್ಲೆ

ವಿದ್ಯುತ್ ಕಂಬ ಸರಿಪಡಿಸಲು ಒತ್ತಾಯ

ಬೆಳ್ತಂಗಡಿ: ಗುರುವಾಯನಕೆರೆ-ಕಾರ್ಕಳ ಹೆದ್ದಾರಿ ರಸ್ತೆಯ ಕಾಪಿನಡ್ಕ ತಿರುವಿನ ಸಮೀಪ ಹಿಮರಡ್ಡಕ್ಕೆ ಹೋಗುವ ರಸ್ತೆ ಇತ್ತೀಚೆಗೆ ಅಗಲೀಕರಣವಾಗಿದ್ದು, ಕಾಮಗಾರಿ ಪರಿಣಾಮ ವಿದ್ಯುತ್ ಕಂಬ ಹಾಗೂ ತಂತಿಗಳು ರಸ್ತೆಗೆ ಜೋತು ಬಿದ್ದು ಬೀಳುವ ಸ್ಥಿತಿಯಲ್ಲಿವೆ. ಅನೇಕ ಬಾರಿ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಪ್ರತಿಕ್ರಿಯೆ ಶೂನ್ಯವಾಗಿದೆ. ಕೂಡಲೇ ಕ್ರಮ ವಹಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.