ಹಾನಗಲ್ಲ: ತಾಲೂಕಿನ ಅಡಕೆ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, 2023&-24ನೇ ಸಾಲಿನಲ್ಲಿ ಅಡಕೆ ಬೆಳೆಗೆ ಕಟ್ಟಿದ ವಿಮಾ ಕಂತಿನ ಪರಿಹಾರ ವಿತರಣೆಯಲ್ಲಿ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಅಡಕೆಯ ಹವಾಮಾನ ಆಧಾರಿತ ಲೆಕ್ಕಾಚಾರದಲ್ಲಿ ಹವಾಮಾನ ಇಲಾಖೆ ವರದಿ ಮತ್ತು ರೈತ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಮಾ ಕಂಪನಿ ಅಧಿಕಾರಿಗಳು ಮತ್ತು ತೋಟಗಾರಿಕೆ ಅಧಿಕಾರಿಗಳ ತುರ್ತು ಸಭೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮಾವು ಬೆಳೆಯ ವಿಮಾ ಪರಿಹಾರ ಬಿಡುಗಡೆ ವಿಳಂಬದ ಕುರಿತು ಚಚಿರ್ಸಬೇಕು. ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಬೆಳೆ ಹಾನಿ ಅನುಭವಿಸಿದ ರೈತರ ಹೊಲಗಳ ಪರಿಶೀಲನೆ ನಡೆಸಬೇಕು. ತಕ್ಷಣ ಪರಿಹಾರಕ್ಕೆ ವ್ಯವಸ್ಥೆ ಕೈಗೊಳ್ಳಬೇಕು. ಪ್ರಸಕ್ತ ಕೃಷಿ ವರ್ಷದಲ್ಲಿ ತಾಲೂಕಿನ ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸಿದ ರೈತರಿಗೆ ವಿಮಾ ಕಂಪನಿ ನಿಯಮಾವಳಿಯಂತೆ ಮಧ್ಯಂತರ ಪರಿಹಾರ ಶೇ. 25ರಷ್ಟು ಹಣ ವಿತರಿಸಬೇಕು ಎಂದು ಆಗ್ರಹಿಸಿದರು.
ರೈತರ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಅ. 30ರೊಳಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ರೈತರ ಸಮ್ಮುಖದಲ್ಲಿ ಪರಿಹರಿಸಬೇಕು. ಇಲ್ಲದಿದ್ದಲ್ಲಿ ತಹಸೀಲ್ದಾರ್ ಕಚೇರಿ ಎದುರು ಅನಿದಿರ್ಷ್ಟಾವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಂದ ಪದಾಧಿಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಶ್ರೀಧರ ಮಲಗುಂದ, ಶಂಕರಗೌಡ ಪಾಟೀಲ, ಅಜ್ಜನಗೌಡ ಕರೇಗೌಡ್ರ, ನಾಗರಾಜ ಹಿತ್ಲೇರ, ಮಹೇಶ ಕೊಂಡೋಜಿ, ಲೋಕೇಶ ಹುಲಿ, ಷಣ್ಮುಖ ಅಂದಲಗಿ, ಮುತ್ತಪ್ಪ ಹಾವನೂರ, ಸಿದ್ದಣ್ಣ ಯಲ್ಲಾಪುರ, ಸಂಜೀವಗೌಡ ಪಾಟೀಲ, ನಿಂಗನಗೌಡ ಪಾಟೀಲ ಇತರರಿದ್ದರು.
ತಾಲೂಕಿನಾದ್ಯಂತ ಗೋವಿನಜೋಳ ಬೆಳೆ ಮುಂಗಾರು ಮತ್ತು ಹಿಂಗಾರು ಮಳೆಗಳಿಂದಾಗಿ ಸಂರ್ಪೂಣ ನಾಶವಾಗಿದೆ. ಈ ಕಾರಣದಿಂದ ಮಧ್ಯಂತರ ಪರಿಹಾರ ವಿತರಣೆಗೆ ರೈತರಿಂದ ಯಾವುದೇ ಅಜಿರ್ ಸ್ವೀಕರಿಸದೇ ಬೆಳೆ ವಿಮೆ ಕಂತು ಪಾವತಿಸಿದ ಎಲ್ಲ ರೈತರಿಗೆ ಸಮಗ್ರವಾಗಿ ಹಣ ವಿತರಣೆ ಕೈಗೊಳ್ಳಬೇಕು. ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ ಹಾನಗಲ್ಲ