ಜಿಲ್ಲೆ

ಅನ್ಯಕೋಮಿನ ಯುವಕನ ಪ್ರೇಮಕಾಟಕ್ಕೆ ಅಪ್ರಾಪ್ತೆ ಬಲಿ

ಮರ್ಯಾದೆಗಂಜಿ ನೇಣಿಗೆ ಕೊರಳೊಡ್ಡಿದ ಬಾಲಕಿ | ಸಿಡಿದೆದ್ದ ವೀರಶೈವ ಮಹಾಸಭೆ / ಶನಿವಾರ ಸಂಜೆ ಬೃಹತ್ ಪ್ರತಿಭಟನೆ 

ವಿಜಯವಾಣಿ ಸುದ್ದಿಜಾಲ ಜೇವರ್ಗಿ

ಅನ್ಯ ಕೋಮಿನ ಯುವಕನ ಪ್ರೇಮದ ಕಾಟದಿಂದ ಬೇಸತ್ತು ಅಪ್ರಾಪ್ತೆಯೊಬ್ಬಳು ಪಟ್ಟಣದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

೮ನೇ ತರಗತಿ ಓದುತ್ತಿದ್ದ ಓಂನಗರ ಬಡಾವಣೆಯ ಮಹಾಲಕ್ಷಿö್ಮÃ (೧೪) ಸಾವಿಗೆ ಶರಣಾದವಳು. ಬಸವೇಶ್ವರ ನಗರದ ಮಹಿಬೂಬ್ ಸಾಬ್ ಮುಲ್ಲಾ (೨೧) ಎಂಬಾತ ಪ್ರೀತಿಸುವಂತೆ ನಿರಂತರ ಕಿರುಕುಳ ನೀಡುತ್ತಿದ್ದ ಕಿರಾತಕ. ನನ್ನೊಂದಿಗೆ ಮಾತಾಡದಿದ್ದರೆ ರೇಪ್ ಮಾಡುವೆ. ಆಗ ಯಾರು ನಿನ್ನ ಮದುವೆಯಾಗುತ್ತಾರೆ ನೋಡುವೆ ಎಂದು ಬೆದರಿಕೆ ಹಾಕುತ್ತಿದ್ದ. ಸಾಕಷ್ಟು ಬಾರಿ ಬೈದು ಕಳಿಸಿದರೂ ಕಿರುಕುಳ ನಿಲ್ಲಿಸದ್ದರಿಂದ ಹೆದರಿ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ.

ಮೃತಳ ತಂದೆ ಯಶವಂತರಾಯಗೌಡ ಬಿರಾದಾರ ದೂರಿನನ್ವಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐ ರಾಜೇಸಾಬ್ ನದಾಫ್, ಪಿಎಸ್‌ಐ ಗಜಾನನ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಿರಾತಕನ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಿ

ಬಾಲಕಿಗೆ ನಿರಂತರ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣವಾದ ಮಹಿಬೂಬ್ ಸಾಬ್ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭೆ ನೇತೃತ್ವದಲ್ಲಿ ಅಖಂಡೇಶ್ವರ ವೃತ್ತದಲ್ಲಿ ಸಾರ್ವಜನಿಕರು ಶನಿವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿದರು.

ಬಾಲಕಿ ಮಹಾಲಕ್ಷಿö್ಮÃ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಅಖಂಡೇಶ್ವರ ವೃತ್ತದಲ್ಲಿ ಜಮಾಯಿಸಿದ ಜನತೆ ಕೆಲಕಾಲ ಸಂಚಾರ ತಡೆದ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ ಮಹಾಸಭೆ ರಾಜ್ಯ ಕರ‍್ಯದರ್ಶಿ ರಾಜಶೇಖರ ಸೀರಿ ಮಾತನಾಡಿ, ಇಡೀ ಸಮಾಜ ತಲೆತಗ್ಗಿಸುವಂಥ ಘಟನೆ ಇದಾಗಿದೆ. ನಿರಂತರ ಕಿರುಕುಳ ನೀಡಿ ಬಾಲಕಿ ಸಾವಿಗೆ ಕಾರಣನಾದ ಕಿರಾತಕ ಮಹಿಬೂಬ್ ಸಾಬ್‌ನನ್ನು ತಕ್ಷಣ ಬಂಧಿಸಿ ಫೋಸ್ಕೋ ಅಡಿ ಕೇಸ್ ದಾಖಲಿಸಬೇಕು. ಇಲ್ಲದಿದ್ದಲ್ಲಿ ಸೋಮವಾರ ಜಿಲ್ಲಾದ್ಯಂತ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ಮುಖಂಡ ಬಸವರಾಜ ಪಾಟೀಲ್ ನರಿಬೋಳ, ವಕೀಲ ಬಸವರಾಜ ಕಂದಗಲ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಪ್ರಮುಖರಾದ ಶರಣಬಸವ ಕಲ್ಲಾ, ಷಣ್ಮುಖಪ್ಪ ಹಿರೇಗೌಡ, ಮಲ್ಲಿಕಾರ್ಜುನ ಆದವಾನಿ, ಅಬ್ದುಲ್ ರಹಿಮಾನ್ ಪಟೇಲ್,