ಜಿಲ್ಲೆ

ನಿಷೇಧದ ನಡುವೆಯೂ ಅದ್ದೂರಿ ಜಾತ್ರೆ

ಚಿಕ್ಕೋಡಿ: ಕರೊನಾ ಭೀತಿ ನಡುವೆಯೂ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.

3 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಯ ಕೊನೆಯ ದಿನ ಮಂಗಳವಾರ ಸಂಜೆ ನಡೆದ ಮೂರ್ತಿಗಳ ಹೊನ್ನಾಟ ಕಾರ್ಯಕ್ರಮದಲ್ಲಿ ಕರೋಶಿ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು.

ಹೊನ್ನಾಟದಲ್ಲಿ ಪಾಲ್ಗೊಂಡ ಭಕ್ತರು ದೇವಿಯ ಮೂರ್ತಿಗೆ ಭಂಡಾರ, ಉತ್ತತ್ತಿ, ಫಲ-ಪುಷ್ಪ ಹಾಗೂ ನೈವೇದ್ಯ ಅರ್ಪಿಸಿದರು. ಬಳಿಕ ಮೂರ್ತಿಗಳ ವಿಸರ್ಜನೆ ಜರುಗಿತು. ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕುದುರೆ, ಸೈಕಲ್ ಶರ್ಯತ್ತು ಜನಮನ ಸೆಳೆದವು.

ಗ್ರಾಮದ ಮುಖಂಡ ಮಹೇಶ ಭಾತೆ, ಬಸವರಾಜ ಭಾತೆ, ಗ್ರಾಪಂ ಅಧ್ಯಕ್ಷ ಸಂಜಯ ಕಾಂಬಳೆ, ವಿಜಯಕುಮಾರ್ ಕೋಠಿವಾಲೆ, ದುಂಡಯ್ಯ ಪೂಜಾರಿ, ಕಾಶಿನಾಥ ಭಾಮನೆ, ಗುರು ನಿರ್ವಾಣಿ, ಅಣ್ಣಪ್ಪ ಶೆಂಡೂರೆ, ಸುರೇಶ ಕೇಸ್ತಿ, ಬಾಳು ಮುಗಳಿ, ಪಿಂಟು ಹಳಿಜೋಳಿ ಹಾಗೂ ಗ್ರಾಪಂ ಸದಸ್ಯರು, ಜಾತ್ರಾ ಕಮಿಟಿ ಸದಸ್ಯರು ಇದ್ದರು.