ನಾಗರಮುನ್ನೋಳಿ ಗ್ರಾಪಂ ಕಾರ್ಯಾಲಯದಲ್ಲಿ ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆ ಆಂದೋಲನಕ್ಕೆ ಚಿಕ್ಕೋಡಿ ತಾಪಂ ಇಒ ಶ್ಯಾಮ್ ಕಾಂದ್ರೋಳಿ ಚಾಲನೆ ನೀಡಿದರು. ಸಿದ್ದಪ್ಪ ಮರ‌್ಯಾಯಿ, ಜಿನಗೌಡ ತೇರದಾಳೆ, ಬೀರಪ್ಪ ನಾಗರಾಳೆ, ದಿಲೀಪ ಬಸನಾಯ್ಕ ಇತರರು ಇದ್ದರು. 
ಜಿಲ್ಲೆ

ಮಹಿಳೆಯರ ಆರ್ಥಿಕ ಉದ್ಧಾರಕ್ಕೆ ಗೃಹಲಕ್ಷ್ಮಿ ಜಾರಿ

ನಾಗರಮುನ್ನೋಳಿ: ಬಡ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಗಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಯಾರಿಗೆ ಸೌಲಭ್ಯ ದೊರಕಿಲ್ಲವೋ ತಲುಪಿಸಲು ಪ್ರಯತ್ನಿಸಬೇಕು ಎಂದು ಚಿಕ್ಕೋಡಿ ತಾಪಂ ಇಒ ಶ್ಯಾಮ ಕಾದ್ರೋಳಿ ಹೇಳಿದರು.

ಗ್ರಾಮದಲ್ಲಿ ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿನಗೌಡ ತೇರದಾಳೆ, ಬೀರಪ್ಪ ನಾಗರಾಳೆ, ದಿಲೀಪ್ ಬಸನಾಯ್ಕ, ಆಸೀಫ್ ಪಠಾಣ, ಅಬ್ದುಲ್ ಕರಿಂ ಬಾಗವಾನ್, ಸತ್ಯಪ್ಪ ಬಗರನಾಳ, ನಿಂಗಪ್ಪ ಭಂಗಿ, ದಸ್ತಗೀರ್ ೆಂಡಾರಿ, ಬಸವರಾಜ ಚೌಗಲಾ ಇತರರು ಇದ್ದರು.