ಕೊಟ್ಟೂರು: ಭಾರತದಲ್ಲಿ ಹಲವಾರು ವರ್ಗದ ಹುಲಿಗಳಿದ್ದು, ಅವುಗಳ ಜೀವನ ಕ್ರಮ ಅತ್ಯಂತ ವಿಭಿನ್ನ ಮತ್ತು ನಿಗೂಢವಾಗಿವೆ ಎಂದು ಕೊಟ್ಟೂರೇಶ್ವರ ಕಾಲೇಜಿನ ಪ್ರಾಚಾರ್ಯ ಡಾ.ಎಂ.ರವಿಕುಮಾರ್ ಹೇಳಿದರು.
ಪಟ್ಟಣದ ಶ್ರೀ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶ್ವ ಹುಲಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಇತೀಚಿನ ಅಂಕಿ ಅಂಶಗಳ ಪ್ರಕಾರ ಹುಲಿಗಳ ಸಂತತಿ ಕ್ಷೀಣಿಸುತ್ತಿರುವುದು ಖೇದಕರ ಸಂಗತಿ.
ಹುಲಿಗಳ ಬೇಟೆಯಾಡಿ ಚರ್ಮ, ಉಗುರು ಮಾರಾಟಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ವಿದ್ಯಾರ್ಥಿಗಳು ಕಾಡುಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಬೇಕು. ಅವುಗಳ ಉಳಿವಿಗೆ ಅರಣ್ಯ ರಕ್ಷಣೆ ಅಗತ್ಯವಿದೆ ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪೃಥ್ವಿರಾಜ್ ಮಾತನಾಡಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥ ಸಿ.ಬಸವರಾಜ್ ಮತ್ತು ಭೌತಶಾಸ್ತ್ರ ವಿಭಾಗದ ಡಾ.ಚೇತನ್ ಮತ್ತು ಗಗನಶ್ರೀ ಇದ್ದರು.