ಕವಿತಾಳ ಸಮೀಪದ ಪಾಮನಕಲ್ಲೂರುನಲ್ಲಿ ಸಾರ್ವಜನಿಕರು ಖಾಲಿಕೊಡವನ್ನಿಡಿದುಕೊಂಡು ಪಂಚಾಯಿತಿಗೆ ಮುತ್ತಿಗೆಹಾಕಿ ಪ್ರತಿಭಟಿಸಿದರು. ಗ್ರಾಂಪಂ ಸದಸ್ಯರಾದ ಬಸವರಾಜ, ಚಿನ್ನಪ್ಪ. ಹನುಮಂತ, ಪ್ರಶಾಂತ, ರಾಜಸಾಬ್ ಕಲ್ಯಾಣಿ, ಮಲ್ಲಪ್ಪ, ರಾಯಪ್ಪ, ವೆಂಕಟೇಶ, ರುದ್ರಣ್ಣ, ಅಮರೇಶ, ಕುಪ್ಪಣ್ಣ, ಯಲ್ಲಮ್ಮ, ನೀಲಮ್ಮ, ರೇಣುಕಾ, ದುರುಗಮ್ಮ, ಸುಶೀಲಮ್ಮ, ಪಾರ್ವತಿ ಇದ್ದರು 
ಜಿಲ್ಲೆ

ನೀರಿಗಾಗಿ ಪಂಚಾಯಿತಿಗೆ ಬೇಲಿ ಹಾಕಿ ಪ್ರತಿಭಟನೆ

ಕವಿತಾಳ: ಸಮೀಪದ ಪಾಮನಕಲ್ಲೂರುಲ್ಲಿ ಕುಡಿಯುವ ನೀರು ಬೀಡುವಂತೆ ಒತ್ತಾಯಿಸಿ, ಮಂಗಳವಾರ ಖಾಲಿ ಕೊಡ ಹಿಡಿದು ಪಂಚಾಯಿತಿಗೆ ಬೇಲಿ ಹಚ್ಚಿ ಪ್ರತಿಭಟಿಸಿದರು.

ಮರೆಯಮ್ಮ ಗುಡಿ ಮತ್ತು ಚಂದ್ರುಧಣಿ ಬಡಾವಣೆಯಲ್ಲಿ ಕಳೆದ 5 ತಿಂಗಳಿನಿಂದ ನೀರು ಬರುತ್ತಿಲ್ಲ ನಮಗೆ ನೀರು ಬೀಡಿ ಎಂದು ಹಲವು ಬಾರಿ ಪಂಚಾಯತಿಗೆ ಮನವಿ ಮಾಡಿದರು ಸಮಸ್ಯೆ ಪರಿಹರಿಸಿಲ್ಲ.

ಹನಿ ನೀರಿಗೆ ರೋಡ್‌ನಲ್ಲಿ ದೊರಕುವ ನೀರಿಗಾಗಿ ಪರದಾಡುವಂತಾಗಿದೆ. ಸಮಸ್ಯೆಗೆ ಪರಿಹರ ಸಿಗುವರೆಗೂ ಪಂಚಾಯಿತಿಗೆ ಹಚ್ಚಿದ ಬೇಲಿ ತೆಗೆಯುವುದಿಲ್ಲ ಎಂದು ಮಹಿಳೆಯರು ಆಕ್ರೊಶ ವ್ಯಕ್ತಪಡಿಸಿದರು.

ಈ ಕುರಿತು ಪಿಡಿಓ ರಾಮಣ್ಣ ನಡಗಿ ಮಾತನಾಡಿ, ಆದೀ ಬಸವಣ್ಣ ದೇವಸ್ಥಾನದ ಹತ್ತಿರದ ಕೊಳವೆಬಾವಿ ನೀರಿನ ಸಂಪರ್ಕ ಸ್ಥಗಿತವಾಗಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ. ಎರಡು ದಿನದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಅಧಿಕಾರಿಗಳು ಲಿಖಿತ ಭರವಸೆಯನ್ನು ಕೊಟ್ಟ ನಂತರ ಹೋರಾಟವನ್ನು ಕೈ ಬಿಟ್ಟರು. ಗ್ರಾಂಪಂ ಸದಸ್ಯರಾದ ಬಸವರಾಜ, ಚಿನ್ನಪ್ಪ, ಹನುಮಂತ, ಪ್ರಶಾಂತ, ರಾಜಸಾಬ್ ಕಲ್ಯಾಣಿ, ಬಸವರಾಜ, ಮಲ್ಲಪ್ಪ, ರಾಯಪ್ಪ, ವೆಂಕಟೇಶ, ದುರುಗಮ್ಮ, ಸುಶೀಲಮ್ಮ, ಪಾರ್ವತಿ, ಕರೆಮ್ಮ, ನಾಗಮ್ಮ ಇದ್ದರು.