ಶಾಸಿನಗರ ಪ್ರದೇಶದಲ್ಲಿ ನರಿ ಕಾಣಿಸಿಕೊಂಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. 
ಜಿಲ್ಲೆ

ಇಬ್ಬರಿಗೆ ಪರಚಿ ಗಾಯಗೊಳಿಸಿದ ನರಿ

ಶಂಕರ ಗೆಜ್ಜಿ

ಬೆಳಗಾವಿ: ಕಳೆದೊಂದು ವಾರದಿಂದ ನಗರದಲ್ಲಿ ಓಡಾಡುತ್ತ ಆತಂಕ ಮೂಡಿಸಿದ್ದ ನರಿ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಸಾರ್ವಜನಿಕರಿಬ್ಬರಿಗೆ ಪರಚಿ ಗಾಯ ಮಾಡಿದೆ. ಆ.28ರಂದು ಮೊದಲ ಬಾರಿಗೆ ಶಾಸಿ ನಗರದಲ್ಲಿ ಕಾಣಿಸಿಕೊಂಡಿದ್ದ ನರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ನಂತರ ನಗರ ಪೊಲೀಸ್ ಆಯುಕ್ತರ ಕಚೇರಿ, ವೈಭವ ನಗರ, ಅಶೋಕ ನಗರ, ಸುಭಾಷ್ ನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಓಡಾಡಿ ಭಯದ ವಾತಾವರಣ ಸೃಷ್ಟಿಸಿತ್ತು.

ರಕ್ಷಣೆಗೆ ಮುಂದಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಯಿಂದಲೂ ತಪ್ಪಿಸಿಕೊಳ್ಳುತ್ತಿದ್ದ ನರಿ ಅಂತಿಮವಾಗಿ ಭಾನುವಾರ ರಾತ್ರಿ ಸುಭಾಷ್ ನಗರದ ಮರಾಠ ಮಂಡಳ ಕಾಲೇಜು ಬಳಿ ಸಿಕ್ಕು ಬಿದ್ದಿದೆ. ನರಿ ರಕ್ಷಣೆಗೆ ಮುಂದಾಗಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಸಾರ್ವಜನಿಕರಿಬ್ಬರಿಗೆ ನರಿ ಪರಚಿ ಗಾಯಗೊಳಿಸಿದ್ದು, ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎರಡು ವರ್ಷ ವಯಸ್ಸಿನ ನರಿ ಆರೋಗ್ಯವಾಗಿದ್ದು ಮೃಗಾಲಯಕ್ಕೆ ಕಳುಹಿಸಿ ಆರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಭಯ ಪಡಬೇಕಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಕಾರಿ ಶಂಕರ ಕಲ್ಲೋಳಿಕರ ತಿಳಿಸಿದ್ದಾರೆ. ಸಿಸಿಎ್ ಮಂಜುನಾಥ ಚವ್ಹಾಣ ಮಾರ್ಗದರ್ಶನದಲ್ಲಿ ಆರ್‌ಎ್ಒ ಪುರುಷೋತ್ತಮ ನೇತೃತ್ವದ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸಿತ್ತು.