ಸಿಂಧನೂರು ಗಾಂಧಿವೃತ್ತದಲ್ಲಿ ಭಗತ್‌ಸಿಂಗ್ ಜನ್ಮದಿನ ಆಚರಣೆ ಮಾಡಲಾಯಿತು. ಭಗತ್‌ಸಿಂಗ್ ಆಟೋ ಚಾಲಕರು ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಉಪಾಧ್ಯಕ್ಷರಾದ ನಾಗಪ್ಪ ಬಿಂಗಿ, ಸದಸ್ಯರಾದ ಬಸವರಾಜ, ಬಾಬು, ರವಿ, ಪರಶುರಾಮ್ ಇತರರಿದ್ದರು. 
ಜಿಲ್ಲೆ

ಯುವಜನರಿಗೆ ಶಹೀದ್ ಭಗತ್‌ಸಿಂಗ್ ಸ್ಫೂರ್ತಿ

ರುದ್ರಪ್ಪ ವಾಲಿ

ಸಿಂಧನೂರು: ತಂತ್ರ್ಯ ಮತ್ತು ದುಡಿಯುವ ವರ್ಗದ ವಿಮೋಚನೆಗಾಗಿ ಧೀರೋದಾತ್ತ ಹೋರಾಟ ಮಾಡಿದ ಶಹೀದ್ ಭಗತ್‌ಸಿಂಗ್ ವಿದ್ಯಾರ್ಥಿ, ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಹೇಳಿದರು.

ನಗರದ ಗಾಂಧಿವೃತ್ತದಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದಿಂದ, ಭಗತ್‌ಸಿಂಗ್ ಜನ್ಮ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ನಿಜವಾದ ಶೋಷಿತ ವರ್ಗಗಳಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಕನಸು ಕಂಡಿದ್ದ ಭಗತ್‌ಸಿಂಗ್ ಬ್ರಿಟಿಷರ ವಿರುದ್ಧ ರಾಜೀರಹಿತ ಹೋರಾಟ ನಡೆಸಿದರು.

23 ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಮೂಲಕ ಇಂದಿಗೂ ಸರ್ವರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವಿದ್ಯಾರ್ಥಿ, ಯುವಜನರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು, ರೈತರು, ಮಹಿಳೆಯರು ಭಗತ್‌ಸಿಂಗರ ತತ್ತ್ವಾದರ್ಶಗಳನ್ನು ಪಾಲಿಸುವ ಮೂಲಕ ಸರ್ವ ಸಮಾನ ಭಾರತ ನಿರ್ಮಾಣಕ್ಕೆ ಶ್ರಮಿಸಿಬೇಕು ಎಂದರು.

ಕಾರ್ಯದರ್ಶಿ ಶೇಕ್ಷಾವಲಿ ಮಾತನಾಡಿ, ಬ್ರಿಟಿಷ್ ಸಾಮ್ರಾಜ್ಯ ಶಾಹಿ ಶಕ್ತಿಗಳ ವಿರುದ್ಧ ಅಂಜದೇ, ಅಳುಕದೇ ಚಿಕ್ಕವಯಸ್ಸಿನಲ್ಲೇ ಹೋರಾಟ ರೂಪಿಸುವ ಮೂಲಕ ಶಹೀದ್ ಭಗತ್‌ಸಿಂಗ್ ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದರು. ಸದಸ್ಯರಾದ ಆನಂದ ಶಿವರಾಜ, ಶೇಷಪ್ಪ, ಮೈಬೂಬ,ರಾಚಪ್ಪ ಇತರರಿದ್ದರು.