ಜಿಲ್ಲೆ

ರೈತರ ಬಲವರ್ಧನೆಗೆ ಶ್ರಮಿಸಲಿ

ಬೈಲಹೊಂಗಲ: ಗ್ರಾಮೀಣ ರೆತರಿಗೆ ಸರಿಯಾಗಿ ಸಾಲ ವಿತರಿಸಿ ಆರ್ಥಿಕವಾಗಿ ಸಬಲರನ್ನಾಗಿಸಲು ಸಂಸ್ಥೆಯ ಆಡಳಿತ ಮಂಡಳಿ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ವಿದ್ಯಾನಗರದಲ್ಲಿರುವ ಕಚೇರಿಯಲ್ಲಿ ಗುರುವಾರ ತಾಲೂಕಿನ ದೊಡವಾಡ ಗ್ರಾಮದ ಶತಮಾನೋತ್ಸವ ಸಂಸ್ಥೆ ಸಂಗಮೇಶ್ವರ ಪಿಕೆಪಿಎಸ್​ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿದರು. ಈ ಸಂಸ್ಥೆ ನೂರು ವರ್ಷಗಳಿಂದ ಷೇರುದಾರರಿಗೆ ಉತ್ತಮ ಸೇವೆ ಒದಗಿಸಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆ ಎಂದರು.

ಪಿಕೆಪಿಎಸ್​ ಅಧ್ಯ ನಿಂಗಪ್ಪ ಚೌಡಣ್ಣವರ, ಉಪಾಧ್ಯ ಗುರುನಾಥ ತಡಕೋಡ ಮಾತನಾಡಿ, ಸಂದ ಸಮಗ್ರ ಅಭಿವದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು. ನಿರ್ದೇಶಕರಾದ ಅಜ್ಜಪ್ಪ ಪಟಾತ, ಬಸವರಾಜ ಮುರಗೋಡ, ಗಿರೀಶ ಧಾರವಾಡ, ಲಕ್ಕಪ್ಪ ಅಲಕ್ಕನವರ, ಗದಿಗೆಪ್ಪ ದೊಡಮನಿ, ತಾಲೂಕು ಕಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ರಾಜು ಭರಮಗೌಡರ ಉಪಸ್ಥಿತರಿದ್ದರು.