ಚಿಕ್ಕೋಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಆಯುಷ್ಮಾನ್ ಭಾರತ’ ಬಡ ಹಾಗೂ ಹಿಂದುಳಿದ ವರ್ಗಗಳಿಗೆ ವರದಾನವಾಗಿದೆ ಎಂದು ಪುರಸಭೆ ಅಧ್ಯಕ್ಷ್ಷೆ ವೀಣಾ ಕವಟಗಿಮಠ ಹೇಳಿದರು.
ಇಲ್ಲಿನ ಎಂ.ಕೆ.ಕವಟಗಿಮಠ ಕನ್ವೇನ್ಶನ್ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಆಯುಷ್ಮಾನ್ ಭಾರತ’ ಗುರುತಿನ ಚೀಟಿ ವಿತರಣೆ, ಪುರಸಭೆಯಿಂದ ಬಿ ಖಾತಾ ಉತಾರ ವಿತರಣೆ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಯುವಧುರೀಣ ವಿಶ್ವನಾಥ ಕಾಮಗೌಡ ಮಾತನಾಡಿ, ನನ್ನ ವಾರ್ಡ್ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಪುಣ್ಯ ಎಂದು ತಿಳಿಸಿದರು.
ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮೀಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರೂ ಆರೋಗ್ಯವಂತರಾಗಿರಲಿ ಎಂಬ ಉದ್ದೇಶದಿಂದ ಬಡ ಜನರಿಗೆ 5 ಲಕ್ಷ ರೂ. ವರೆಗೆ ‘ಆಯುಷ್ಮಾನ್ ಭಾರತ’ ವಿಮೆ ಯೋಜನೆ ಜಾರಿಗೆ ತಂದಿದ್ದಾರೆ. ಫಲಾನುಭವಿಗಳು ಅದರ
ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು,.
ಪುರಸಭೆ ಸದಸ್ಯರಾದ ರಂಜನಾ ಕಾಮಗೌಡ, ಸಂತೋಷ ಜುಗುಳೆ, ಭೀಮಸಿ ಚೆನ್ನವರ, ಶಿವಪ್ಪ ಚೆನ್ನವರ, ಧನಪಾಲ ದಾಮನ್ನವರ, ಗಣಪತಿ ಕಾಂಬಳೆ, ಸಂಭಾ ಮಲಬಾಧೆ, ಶ್ರೀಕಾಂತ ಕಗ್ಗೂಡೆ, ಚಿಕ್ಕೊಪ್ಪ ಪೂಜೇರಿ, ಶ್ರೀಕಾಂತ ಪೂಜಾರಿ, ಪ್ರಕಾಶ ಕವಟಗಿಮಠ, ಕಲಗೌಡ ಪಾಟೀಲ, ವಿಠ್ಠಲ ಜಮಗೌಡರ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಲಕ್ಷ್ಮಣ ಮೊಳಕೆ, ಬಸವರಾಜ ಚೆನ್ನವರ, ಸುಭಾಸ ಸಂಕಪಾಳ ಇತರರಿದ್ದರು. ಲಕ್ಷ್ಮೀ ಕೋಟಗಿ ನಿರೂಪಿಸಿದರು.