ಚನ್ನಮ್ಮ ಕಿತ್ತೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಸಕ ಮಹಾಂತೇಶ ದೊಡಗೌಡರ ಬಡವರಿಗೆ ಉಚಿತ ಕನ್ನಡಕ ವಿತರಿಸಿದರು. ಶಿವಾನಂದ ಮಾಸ್ತಿಹೊಳಿ, ಉಳವಪ್ಪ ಉಳ್ಳಾಗಡ್ಡಿ ಮತ್ತಿತರರು ಉಪಸ್ಥಿತರಿದ್ದರು. 
ಜಿಲ್ಲೆ

ಬಡವರಿಗೆ ಶಾಸಕರಿಂದ ಕನ್ನಡಕ ವಿತರಣೆ

ಚನ್ನಮ್ಮ ಕಿತ್ತೂರ: ಬಡವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೆಬ್ಬಯಕೆಯಂತೆ ಬಡ ರೋಗಿಗಳಿಗೆ ಉಚಿತ ಕನ್ನಡಕ ವಿತರಿಸಲಾಗುತ್ತಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 40 ಬಡವರಿಗೆ ಉಚಿತ ಕನ್ನಡಕ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸಮವಸ ವಿತರಿಸಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಉಳವಪ್ಪ ಉಳ್ಳಾಗಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂದೀಪ ದೇಶಪಾಂಡೆ, ಉಮಾದೇವಿ ಬಿಕ್ಕಣ್ಣವರ, ಎಸ್.ಆರ್.ಪಾಟೀಲ, ಕಿರಣ ಪಾಟೀಲ, ಶಿವಾನಂದ ಹನುಮಸಾಗರ, ಈರಣ್ಣ ಬಡಿಗೇರ, ಗೋಪಾಲ ಹುಕ್ಕೇರಿ, ಸುಭಾಷ ರಾವಳ, ಬಸವರಾಜ ಮಾತನವರ, ರಾಜು ಬೆಂಡಿಗೇರಿ, ಶಂಕರ ಗುರುಪುತ್ರನವರ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.