ವಿಠಲಾಪುರ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ದಿನಾಚರಣೆಯನ್ನು ಹಿರಿಯ ಆರೋಗ್ಯ ಸಹಾಯಕಿ ಸುಶೀಲಾದೇವಿ ಗುರುವಾರ ಉದ್ಘಾಟಿಸಿದರು. ಸಿಬ್ಬಂದಿ ರಾಜೇಶ್ವರಿ, ಭಾಗ್ಯಲಕ್ಷ್ಮೀ, ಸುಜಾತಾ, ಹನುಮಂತಿ ಇತರರಿದ್ದರು. 
ಜಿಲ್ಲೆ

ಮಗುವಿನ ಆರೋಗ್ಯಕ್ಕೆ ತಾಯಿ ಹಾಲು ಸೂಕ್ತ: ಆರೋಗ್ಯ ಸಹಾಯಕಿ ಸುಶೀಲಾದೇವಿ ಅನಿಸಿಕೆ

ಕನಕಗಿರಿ: ತಾಯಿ ಹಾಲು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಗಿದೆ ಎಂದು ಮುಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಸುಶೀಲಾದೇವಿ ಹೇಳಿದರು.


ಸಮೀಪದ ವಿಠಲಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿ ಹಾಲಿನಲ್ಲಿ ಗಿಣ್ಣಿನ ಅಂಶವಿರುವುರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತಾಯಿ ಹಾಗೂ ಮಗುವಿನ ನಡುವೆ ಬಾಂದವ್ಯ ಹೆಚ್ಚಾಗುತ್ತದೆ. ಕನಿಷ್ಠ 6 ತಿಂಗಳವರೆಗೆ ಮಗುವಿಗೆ ಹಾಲುಣಿಸಬೇಕು ಎಂದರು. ಸಿಬ್ಬಂದಿ ರಾಜೇಶ್ವರಿ, ಭಾಗ್ಯಲಕ್ಷ್ಮೀ, ಸುಜಾತಾ, ಹನುಮಂತಿ, ವನಜಾಕ್ಷಿ ಇತರರಿದ್ದರು.