ಮಾನ್ವಿ: ತಾಲೂಕಿನಲ್ಲಿ ಭಾನುವಾರ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮ ಕಂಡುಬಂತು. ಭೋಗಿ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಭಾನುವಾರ ವಿವಿಧ ತರಕಾರಿ ಖರೀದಿ ಮಾಡಿದರು.
ಗೆಜ್ಜರಿ, ಕುಂಬಳಕಾಯಿ, ಉಳ್ಳಾಗಡ್ಡೆ ತೊಪ್ಪಲು, ಮೆಂತೆಪಲ್ಯ, ಕಡಲೆಕಾಯಿ, ಎಳ್ಳು, ಬೆಲ್ಲ, ಕಬ್ಬುಗೆ ಬೇಡಿಕೆ ಹೆಚ್ಚಿತ್ತು. ಬಹುತೇಕ ತರಕಾರಿಗಳ ಬೆಲೆ ಕೆಜಿಗೆ 60ರಿಂದ 80 ರೂ. ವರೆಗೆ ಇದ್ದವು. ಬರಗಾಲ ಆವರಿಸಿದ್ದರೂ ಹಬ್ಬದ ಸಂಭ್ರಮಕ್ಕೆ ಕೊರತೆಯಾಗಲಿಲ್ಲ. ಬರಗಾಲವಿದ್ದರೂ, ಬೆಲೆ ಏರಿಕೆಯಾಗಿದ್ದರೂ ಹಬ್ಬ ಆಚರಿಸಲೇಬೇಕು. ಸಂಕ್ರಾಂತಿ ಸುಗ್ಗಿ ಹಬ್ಬವಾಗಿರುವುದರಿಂದ ಬೆಳೆಗಳಿಗೆ ಪೂಜೆ ಸಲ್ಲಿಸಿ ಸಮಯಕ್ಕೆ ಸರಿಯಾಗಿ ಮಳೆ-ಬೆಳೆ ನೀಡಲಿ ಎಂದು ಭೂತಾಯಿಯನ್ನು ಬೇಡಿಕೊಳ್ಳಲಾಗುವುದು ಎಂದು ರೈತ ಜಿ.ಅಮರೇಶ ತಿಳಿಸಿದರು.