ಸಿಂಧನೂರು: ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿಗೆ ಕಾರಣರಾದ ಶಾಸಕ, ಪುತ್ರನ ವಿರುದ್ಧ ಕ್ರಮಕೈಗೊಳ್ಳಬೇಕು. ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಸಮಿತಿ, ತಹಸಿಲ್ ಕಚೇರಿಯಲ್ಲಿ ಬುಧವಾರ ಉಪತಹಸೀಲ್ದಾರ್ ಚಂದ್ರಶೇಖರರಿಗೆ ಮನವಿ ಸಲ್ಲಿಸಿತು.
ಇದನ್ನು ಓದಿ: ಹೆಂಡತಿ ಸಾವು ಪ್ರಕರಣ, ಗಂಡನಿಗೆ ಜೀವಾವಧಿ ಶಿಕ್ಷೆ
ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರ ಪಂಪನಗೌಡ ಪಿಎಸ್‌ಐ ಪರುಶುರಾಮ ಅವರ ವರ್ಗಾವಣೆ ವಿಷಯಕ್ಕೆ ಹಣದ ಬೇಡಿಕೆಯನ್ನಿಟ್ಟು ಒತ್ತಡ ಹಾಕಲಾಗಿತ್ತು. ಈ ಕುರಿತು ಮನಸ್ಸಿನ ಒತ್ತಡದಿಂದಾಗಿ ಮೃತಪಟ್ಟಿದ್ದಾರೆ.
ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಪೊಲೀಸ್ ರಕ್ಷಣೆ ನೀಡಬೇಕು. ಶಾಸಕ ಚನ್ನಾರೆಡ್ಡಿ ಹಾಗೂ ಅವರ ಮಗನನ್ನು ಕೂಡಲೇ ಬಂಧಿಸಲು ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿತು.