filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; motionR: 0; delta:null; module: photo;hw-remosaic: false;touch: (0.44611093, 0.21017863);sceneMode: 7864320;cct_value: 0;AI_Scene: (-1, -1);aec_lux: 122.997696;aec_lux_index: 0;albedo: ;confidence: ;motionLevel: 0;weatherinfo: null;temperature: 33; 
ಜಿಲ್ಲೆ

ಭವಿಷ್ಯಕ್ಕೆ ವಿದ್ಯಾರ್ಥಿ ಮಿತ್ರ ಸಹಕಾರಿ

ಮುಗಳಿಹಾಳ: ಸಾಮಾನ್ಯಜ್ಞಾನ ವೃದ್ಧಿ ಜತೆಗೆ ಪಠ್ಯೇತರ ಚಟುವಟಿಕೆ ಮಾರ್ಗದರ್ಶಿಯನ್ನು ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಹೊರ ತಂದಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಖ್ಯಶಿಕ ಐ.ಜಿ.ಸುಬ್ಬಾಪುರಮಠ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಪಂ ಸದಸ್ಯ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ವಿವಿಧ ಸ್ಪರ್ಧಾತ್ಮಕ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆಗಳಿಗೆ ಪೂರಕವಾಗಿ ನುರಿತ ಶಿಕರಿಂದ ವಿದ್ಯಾರ್ಥಿಮಿತ್ರ ಪ್ರಕಟವಾಗುತ್ತಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯ ನಾಗಪ್ಪ ಪುಂಜಿ ಮಾತನಾಡಿ, ನಿರಂತರ ಅಧ್ಯಯನ, ಶಿಕರ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಕಲಿತ ಶಾಲೆ ಹಾಗೂ ಹೆತ್ತವರಿಗೆ ಕೀರ್ತಿ ತರಬೇಕು ಎಂದರು.

ವರದಿಗಾರ ಬಸಪ್ಪ ದಳವಾಯಿ, ಕೆಎಂಎ್​ ನಿರ್ದೇಶಕ ದುರಗಪ್ಪ ದಳವಾಯಿ, ಸಿಡಿಸಿ ಸದಸ್ಯ ಮುತ್ತು ದಳವಾಯಿ, ಗ್ರಾಪಂ ಸಿಬ್ಬಂದಿ ಮಂಜು ದಳವಾಯಿ, ಎಸ್​.ಎಸ್​.ಗಾಣಿಗೇರ, ಎಸ್​.ಎಂ.ಪಾಟೀಲ, ಸತೀಶ ಹುಲಕುಂದ ಇತರರಿದ್ದರು.