ಕೊಕ್ಕಡ: ಕೊಕ್ಕಡ ಗ್ರಾಮದ ಶ್ರೀ ಕ್ಷೇತ್ರ ಸೌತಡ್ಕದ ಜಮೀನಿಗೆ ಎದುರಾಗಿರುವ ಆತಂಕ ಮತ್ತು ಇದನ್ನು ಸರಿಪಡಿಸುವ ಯತ್ನಗಳ ಬಗ್ಗೆ ಸಮಾನ ಮನಸ್ಕರು ಸೇರಿ ಗುರುವಾರ ಕೊಕ್ಕಡದಲ್ಲಿ ಸಮಾಲೋಚನಾ ಸಭೆ ನಡೆಯಿತು. ಸೌತಡ್ಕ ಮಹಾ ಗಣಪತಿ ಕ್ಷೇತ್ರದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಕುರಿತಾದ ಮುಂದಿನ ಪ್ರಯತ್ನಗಳಿಗೆ ಹೋರಾಟ ವೇದಿಕೆಯೊಂದನ್ನು ರಚಿಸಲು ತೀರ್ಮಾನವಾಗಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ, ಕೊಕ್ಕಡ ಎಂಬ ಹೆಸರಿನಲ್ಲಿ ವೇದಿಕೆ ರಚಿಸಲಾಯಿತು. 33 ಮಂದಿ ಪದಾಧಿಕಾರಿಗಳ ಆಯ್ಕೆ ಮಾಡುವುದೆಂದು ನಿರ್ಣಯಿಸಿ, ಸರ್ವಾನುಮತದಿಂದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ, ಉಪಾಧ್ಯಕ್ಷರಾಗಿ ಶ್ರೀಕೃಷ್ಣ ಭಟ್ ಕುಡ್ತಲಾಜೆ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ ಶೆಟ್ಟಿ ನೆಲ್ಯಾಡಿ, ತುಕ್ರಪ್ಪ ಶೆಟ್ಟಿ ನೂಜೆ, ಮೋಹನ ರೈ ಕುಂಟಾಲಪಲ್ಕೆ, ಕಾರ್ಯದರ್ಶಿಯಾಗಿ ಶ್ಯಾಮರಾಜ್ ಪಟ್ರಮೆ, ಜತೆಕಾರ್ಯದರ್ಶಿಗಳಾಗಿ ಸುನೀಶ್ ನಾಯ್ಕ, ಗಣೇಶ್ ಕಾಶಿ, ಹರೀಶ್ಚಂದ್ರ ಜೋಡುಮಾರ್ಗ, ದಯಾನೀಶ್ ಕೊಕ್ಕಡ, ಖಜಾಂಚಿಯಾಗಿ ವಿಶ್ವನಾಥ ಕೊಲ್ಲಾಜೆ, ಸಮಿತಿ ಸದಸ್ಯರುಗಳಾಗಿ ಲಕ್ಷ್ಮೀನಾರಾಯಣ ಉಪ್ಪಾರ್ಣ, ಗೋಪಾಲಕೃಷ್ಣ ಭಟ್ ಮುನ್ನಡ್ಕ, ಎ.ಎನ್.ಶಬರಾಯ, ಪದ್ಮನಾಭ ಆಚಾರ್ಯ, ಚರಣ್ ಕೊಕ್ಕಡ, ಗಣೇಶ್ ಪಿ.ಕೆ, ಧನಂಜಯ ಪಟ್ರಮೆ, ಕೃಷ್ಣಪ್ಪ ಗೌಡ ಪೂವಾಜೆ, ಧರ್ಮರಾಜ್ ಅಡ್ಕಾರಿ, ಜಯಂತ ಗೌಡ ಮಾಸ್ತಿಕಲ್ಲು, ಜಾರಪ್ಪ ಗೌಡ ಸಂಕೇಶ, ಲಕ್ಷ್ಮೀನಾರಾಯಣ, ವಿಶ್ವನಾಥ ಮೀಯಾಳ, ಗಣೇಶ ಪೂಜಾರಿ, ಶೀನ ನಾಯ್ಕ ಅವರನ್ನು ಆಯ್ಕೆ ಮಾಡಲಾಯಿತು. ವಕೀಲ ಬಿ.ಎಂ.ಭಟ್, ಪ್ರಶಾಂತ್, ವೆಂಕಟ್ರಮಣ ಡೆಂಜ ವೇದಿಕೆಗೆ ಸಲಹೆಗಾರರಾಗಿ ಆಯ್ಕೆಯಾದರು.
ಶ್ರೀ ಕ್ಷೇತ್ರದ ಜಮೀನು ಉಳಿಸಿಕೊಳ್ಳುವ ಸಲುವಾಗಿ ವೇದಿಕೆ ಮೂಲಕ ಸರ್ಕಾರವನ್ನು ಸಂಪರ್ಕಿಸುವುದು, ಧರಣಿ, ಕಾನೂನು ಹೋರಾಟ, ಆಂದೋಲನಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನವಾಯಿತು. ನ.5ರಂದು ಮಂಗಳೂರಿನಲ್ಲಿ ವೇದಿಕೆಯ ಸುದ್ದಿಗೋಷ್ಠಿ ನಡೆಸಿ, ಬಳಿಕ ನ.11ರಿಂದ ಸೌತಡ್ಕದಲ್ಲಿ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸುವುದೆಂದು ನಿರ್ಣಯಿಸಲಾಯಿತು. ಇದಕ್ಕೆ ಪೂರಕವಾಗಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು.