ಬೋರಗಾಂವ: ದೇಶದ ಜನಸಂಖ್ಯೆಯಲ್ಲಿ ಶೇ.54 ಜನರು ಕೃಷಿ ಅವಲಂಭಿಸಿದ್ದಾರೆ. ರೈತರ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಸಂಗಳ ಪಾತ್ರ ಪ್ರಮುಖವಾಗಿದೆ ಎಂದು ಸಹಕಾರ ಸಂಗಳ ಅಭಿವೃದ್ಧಿ ಅಧಿಕಾರಿ ಶಂಕರ ಕರಿಬಸಣ್ಣನವರ ಅಭಿಪ್ರಾಯ ಪಟ್ಟರು.
ಪಟ್ಟಣದ ಅರಿಹಂತ ಸಭಾಂಗಣದಲ್ಲಿ ಬೋರಗಾಂವ ಹಾಗೂ ಸುತ್ತಮುತ್ತಲಿನ ಸಹಕಾರಿ ಸಂಗಳ ನಿರ್ದೇಶಕರು ಹಾಗೂ ನೌಕರರಿಗೆ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಸಹಕಾರಿ ಸಂದಲ್ಲಿ ಆಗುತ್ತಿರುವ ಆಮೂಲಾಗ್ರ ಬದಲಾವಣೆ ಒಪ್ಪಿಕೊಳ್ಳಬೇಕು. ಸಹಕಾರಿ ಸಂಗಳ ಮೇಲೆ ಸದಸ್ಯರ ಮತ್ತು ನಾಗರಿಕರ ನಂಬಿಕೆ ಕಡಿಮೆಯಾಗುತ್ತಿದೆ. ನಂಬಿಕೆ ಹೆಚ್ಚಿಸಲು ವಿವಿಧ ಯೋಜನೆ ಹಮ್ಮಿಕೊಳ್ಳಬೇಕು ಎಂದರು.
ಸಹಕಾರಿ ಸಂದ ನಿವೃತ್ತ ಸಹಾಯಕ ನಿರ್ದೇಶಕ ಪಿ.ಎಸ್.ವಾಲಿ ಮಾತನಾಡಿ, ಸಂಗಳನ್ನು ಮುನ್ನಡೆಸುವವರು ರಿಸರ್ವ್ ಬ್ಯಾಂಕ್ ಮತ್ತು ಸಹಕಾರಿ ತಂಡದ ಪ್ರತಿಯೊಂದು ನಿಯಮ ತಿಳಿದುಕೊಳ್ಳುವುದು ಅವಶ್ಯಕ. ಪ್ರತಿ ಲೆಕ್ಕಪರಿಶೋಧನಾ ವರದಿಯು ಸಹಕಾರಿ ನಿಯಮ ಪಾಲಿಸಬೇಕು. ಸಾಲ ವಸೂಲಿ ಮಾಡುವ ಜವಾಬ್ದಾರಿ ನಿರ್ದೇಶಕರು ಮತ್ತು ನೌಕರರ ಮೇಲಿದೆ ಎಂದು ಹೇಳಿದರು.
ಸಹಕಾರಿ ಸಂದ ಶ್ರೀಶೈಲ ಯಡಹಳ್ಳಿ, ಕೃಷಿ ಸಂದ ಉಪಾಧ್ಯ ಸುಮಿತ ರೋಡ್ಡ, ಸಿಇಒ ಆರ್.ಟಿ.ಚೌಗುಲಾ, ಅರಿಹಂತ ಸಂಸ್ಥೆಯ ಸಿಇಒ ಅಶೋಕ ಬಂಕಾಪುರೆ, ಅಭಯಕುಮಾರ ಮಗದುಮ್, ಜನತಾ ಸಂಸ್ಥೆ ಅಧ್ಯ ಶಂಕರ ಮಾಳಿ, ಮಲ್ಲಪ್ಪ ಹಂಡೆ, ರಾಮ ಚೌಗುಲೆ ,ಅಶ್ವಿನಿ ಮಗದುಮ್, ದರ್ಶನ ಪಾಟೀಲ, ರಾಜೇಂದ್ರ ಪಾಟೀಲ, ಪ್ರದಿಪ ಮಾಳಿ ಇತರರು ಇದ್ದರು.