ಮೇದಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮೇದಾರ ಸಮುದಾಯದ ಮಹಿಳೆಯರು ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಚನ್ನವ್ವ ಮುನವಳ್ಳಿ, ಉಪಾಧ್ಯಕ್ಷೆ ಸರೋಜಾ ಮೇದಾರ, ಗೀತಾ ಹುಬ್ಬಳ್ಳಿ, ಸುಜಾತಾ ಬೆಟಗೇರಿ ಇತರರು ಇದ್ದರು. 
ಜಿಲ್ಲೆ

ಮೇದಾರರಿಗೂ ಆರ್ಥಿಕ ನೆರವು ನೀಡಿ

ಬೈಲಹೊಂಗಲ: ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಮೇದಾರ ಸಮುದಾಯಕ್ಕೆ ಅಗತ್ಯ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಸಮುದಾಯದ ಮಹಿಳೆಯರು ಗುರುವಾರ ಶಾಸಕ ಮಹಾಂತೇಶ ಕೌಜಲಗಿ, ಎಸಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಕೋವಿಡ್-19 ಸೃಷ್ಟಿಸುತ್ತಿರುವ ಅನಾಹುತಗಳು ಮನುಕುಲವನ್ನೇ ಸಮಸ್ಯೆಗೆ ಸಿಲುಕಿಸಿದೆ. ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮ ನಾವು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಮೇದಾರ ಸಮುದಾಯ ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಕಾಯಕವನ್ನು ಕೈಗೊಳ್ಳಲು ಅವಶ್ಯಕವಾಗಿರುವ ಬಿದಿರು ಪೂರೈಕೆಯಾಗದ್ದರಿಂದ ಹಾಗೂ ಈಗಾಗಲೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದ್ದರಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಕೂಡಲೇ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದರು.

ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಚನ್ನವ್ವ ಮುನವಳ್ಳಿ, ಉಪಾಧ್ಯಕ್ಷೆ ಸರೋಜಾ ಮೇದಾರ, ಗೀತಾ ಹುಬ್ಬಳ್ಳಿ, ಸುಜಾತಾ ಬೆಟಗೇರಿ, ಬಸವರಾಜ ಬೆಟಗೇರಿ, ಶಂಕರ ಮುನವಳ್ಳಿ, ಗುರುಪಾದ ಬೆಟಗೇರಿ, ಅರವಿಂದ ಹುಬ್ಬಳ್ಳಿ ಇತರರಿದ್ದರು.