ಕಬ್ಬೂರ: ಗ್ರಾಮಗಳು ಸುಧಾರಣೆಯಾಗಬೇಕಾದರೆ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಜಾಗನೂರ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ ಹೇಳಿದರು.
ಗ್ರಾಪಂ ವ್ಯಾಪ್ತಿಯ ಮಮದಾಪುರ ಕೆ.ಕೆ ಗ್ರಾಮದಲ್ಲಿ ಗ್ರಾಪಂ ಅನುದಾನದಲ್ಲಿ ಬಿಡುಗಡೆಯಾದ ಸಂಗೊಳ್ಳಿ ವತ್ತದಿಂದ ದುರ್ಗಾ ದೇವಸ್ಥಾನ ಹಾಗೂ ಅಂಬೇಡ್ಕರ್ ಭವನದಿಂದ ಪಾಮಲದಿನ್ನಿ ರಸ್ತೆ ವರೆಗಿನ 16ಲಕ್ಷ ರೂ.ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ಪ್ರತಿಯೊಂದು ಅಭಿವದ್ಧಿಗೆ ಎಲ್ಲರೂ ಕೈಗೂಡಿಬೇಕು ಎಂದರು.
ಗ್ರಾಪಂ ಸದಸ್ಯರಾದ ಮಲ್ಲೇಶ ಹನುಮಂತಗೋಳ, ಮಹಾತೇಶ ಶಿರಗೂರ, ಲಕ್ಷ್ಮಣ ಹನಮನ್ನವರ, ಮಾರುತಿ ಹಮ್ಮಾರ, ಬೀರಪ್ಪ ಬೆಕ್ಕೇರಿ, ರಬಸಿದ್ದ ವಡೇರಟ್ಟಿ, ಅಜ್ಜಪ್ಪ ಮಸಗುಪ್ಪಿ, ಲಂಕೇಶ ಹನಮನ್ನವರ, ಬೀರಪ್ಪ ಡೋಣಿ, ವಿನೋದ ಮಗದುಮ್ಮ, ಗೋಪಾಲ ನಾವಿ, ಬಸವರಾಜ ಬೆಕ್ಕೇರಿ ಇತರರು ಇದ್ದರು.