ಕುಕನೂರಿನ 15ನೇ ವಾರ್ಡ್‌ನ ಚನ್ನಬಸವೇಶ್ವರ ನಗರದಲ್ಲಿ ನೀರು ಸಂಗ್ರಹವಾಗಿ ರಸ್ತೆ ಅನೈರ್ಮಲ್ಯದಿಂದ ಕೂಡಿರುವುದು. ನಿವಾಸಿಗಳಾದ ಹುಸೇನ್‌ಸಾಬ್ ನಧಾಪ್, ವಿನಾಯಕ ಮುತ್ತಾಳ ಇದ್ದಾರೆ. 
ಜಿಲ್ಲೆ

ಚನ್ನಬಸವೇಶ್ವರ ನಗರಕ್ಕೆ ಸೌಕರ್ಯ ಕಲ್ಪಿಸಿ

ಕುಕನೂರು: ಪಟ್ಟಣದ 15ನೇ ವಾರ್ಡ್‌ನ ಚನ್ನಬಸವೇಶ್ವರ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ನಿವಾಸಿಗಳು ಶುಕ್ರವಾರ ಆಗ್ರಹಿಸಿದರು. ಕಾಲನಿ ನಿರ್ಮಾಣವಾಗಿ 15 ವರ್ಷವಾದರೂ ಪಪಂನಿಂದ ಕುಡಿವ ನೀರಿನ ಸೌಲಭ್ಯ ಒದಗಿಸಿಲ್ಲ. ಸಿಸಿ ರಸ್ತೆ ನಿರ್ಮಾಣಕ್ಕೆ ಸಂಸದ ಸಂಗಣ್ಣ ಕರಡಿ ಅನುದಾನ ನೀಡಿದರೂ ಕಾಮಗಾರಿ ಪ್ರಾರಂಭಿಸಿಲ್ಲ. ಕುಡಿವ ನೀರಿಗಾಗಿ ಸ್ವಂತ ಬೋರ್‌ವೆಲ್ ನಿರ್ಮಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಪಪಂ ಮುಖ್ಯಾಧಿಕಾರಿ ಕೂಡಲೇ ಕಾಲನಿ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.


ನಿವಾಸಿಗಳಾದ ಹುಸೇನ್‌ಸಾಬ್ ನಧಾಪ್, ವಿನಾಯಕ ಮುತ್ತಾಳ, ಅಯುಬ್ ಇಳಕಲ್, ನಿವೃತ್ತ ಯೋಧ ಗಜಕೋಶ ಇತರರಿದ್ದರು.