ಜಿಲ್ಲೆ

ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಅನುದಾನ

ಮುರಗೋಡ: ಮಠ-ಮಂದಿರಗಳ ಜೀರ್ಣೋದ್ಧಾರದಿಂದ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ. ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದ ಮಾದರಿಯಲ್ಲಿ ಇಲ್ಲಿನ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಅಯ್ಯಪ್ಪಸ್ವಾಮಿ ಸನ್ನಿಧಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವುದಾಗಿ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಇಲ್ಲಿನ ಬೆಟ್ಟದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಸೇವಾ ಸಮಿತಿ 11ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಭವನದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೆಂಗೇರಿ ಶಿವಚಿದಂರೇಶ್ವರ ಮಠದ ದಿವಾಕರ ದಿಕ್ಷೀತ ಸ್ವಾಮೀಜಿ, ಹುಬ್ಬಳ್ಳಿಯ ಮೋಹನ ಗುರುಸ್ವಾಮಿ ಮಾತನಾಡಿ, ಶ್ರದ್ಧಾ, ಭಕ್ತಿಯಿಂದ ಅಯ್ಯಪ್ಪಸ್ವಾಮಿ ಆರಾಧಿಸಿದರೆ ಸಂಕಷ್ಟಗಳು ದೂರಾಗಿ ಸಮೃದ್ಧ ಬದುಕು ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು.

ಅಯ್ಯಪ್ಪಸ್ವಾಮಿ ಟ್ರಸ್ಟ್ ಅಧ್ಯಕ್ಷ ಮಹಾಂತೇಶ ಅಳಾಜ, ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಯ್ಯಪ್ಪಸ್ವಾಮಿ ಮಹಾಪೂಜೆ ನಿಮಿತ್ತ 18 ಮೆಟ್ಟಿಲು ಮಹಾಪೂಜೆ, ದೀಪ ಸೇವೆ, ತೊಟ್ಟಿಲೋತ್ಸವ, ಅನ್ನಪೂಣೇಶ್ವರಿ ಪೂಜೆ ಸೇರಿ ವಿವಿಧ ಪೂಜೆ ಕೈಂಕರ್ಯಗಳು ನೆರವೇರಿದವು. ಬಳಿಕ ಅನ್ನಸಂತರ್ಪಣೆ ಜರುಗಿತು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಪಂಚನಗೌಡ ದ್ಯಾಮನಗೌಡರ, ಸಚಿನ ದೇಸಾಯಿ, ಎ್.ಎಸ್.ಸಿದ್ಧ್ದನಗೌಡರ, ಗುರುಪಾದ ಕಳ್ಳಿ, ಸುನೀಲ ವರ್ಣಿಕರ, ರತ್ನಾಕರ ಶೆಟ್ಟಿ, ಮಡಿವಾಳೆಪ್ಪ ಬಿದರಗಡ್ಡಿ, ಗುರುಮಹಾಂತೇಶ ಹಿರೇಮಠ, ಎಪಿಎಂಸಿ ಸದಸ್ಯ ರಾಜು ಕಲಾಲ, ಅಶೋಕ ಕುಂಬಾರ, ಎಂ.ಯು.ಉಪ್ಪಿನ, ಶಿವಪ್ರಸಾದ ಹುಲ್ಲೆಪ್ಪನವರಮಠ ಇತರರಿದ್ದರು.